611 ಅಂಕ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ10,400ಕ್ಕೆ

Update: 2018-03-12 14:45 GMT

ಮುಂಬೈ, ಮಾ.12: ಅಮೆರಿಕದ ಆರ್ಥಿಕತೆಯಲ್ಲಿ ಕಂಡುಬಂದಿರುವ ಚೇತರಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ವೇಗ ಉಂಟಾಗಿದ್ದು ಇದರ ಪರಿಣಾಮ ಭಾರತೀಯ ಶೇರುಪೇಟೆಯ ಮೇಲೂ ಬಿದ್ದಿದೆ. ಸೋಮವಾರಂದು ಬಿಎಸ್‌ಇ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡು 33,917.94ಕ್ಕೆ ತಲುಪಿದೆ. ಈ ಮಟ್ಟದ ಏರಿಕೆ ಮಾರ್ಚ್ 2016ರ ನಂತರ ಇದೇ ಮೊದಲ ಬಾರಿ ಉಂಟಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ವಿದೇಶಿ ಬಂಡವಾಳ ಭಾರತೀಯ ಮಾರುಕಟ್ಟೆಗೆ ಧಾರಾಳವಾಗಿ ಬರುತ್ತಿರುವುದು ಮತ್ತು ಹಣದುಬ್ಬರ ಮತ್ತು ಕೈಗಾರಿಕಾ ಅಂಕಿಅಂಶಗಳು ಉತ್ತಮವಾಗಿರುವವು ಎಂಬ ನಿರೀಕ್ಷೆಯಿಂದ ಈ ಏರಿಕೆ ಉಂಟಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಫ್ಟಿ ಕೂಡಾ 194.55 ಅಂಕ ಏರಿಕೆ ಕಂಡು 10,421.40ಗೆ ಕೊನೆಯಾಯಿತು. ದಿನದ ವಹಿವಾಟಿನಲ್ಲಿ ನಿಫ್ಟಿ 10,433.65 ಅಂಕ ತಲುಪಿತ್ತು. ಹೂಡಿಕೆದಾರರು ಖರೀದಿಗೆ ಮುಂದಾದ ಕಾರಣ ಈ ರೀತಿಯ ಏರಿಕೆ ಕಂಡುಬಂದಿದೆ. ಅಮೆರಿಕದ ಉದ್ಯೋಗ ವರದಿಯು ಗುಣಾತ್ಮಕವಾಗಿರುವುದು ಕೂಡಾ ಈ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶೇಷಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News