ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

Update: 2018-03-14 08:24 GMT

ಲಂಡನ್, ಮಾ.14: ವಿಶ್ವವಿಖ್ಯಾತ ವಿಜ್ಞಾನಿ ಹಾಗೂ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್  ತಮ್ಮ 76ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಅವರು ಇಂಗ್ಲೆಂಡ್ ನ ಕ್ಯಾಂಬ್ರಿಡ್ಜ್ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರೆಂದು ಅವರ ಮಕ್ಕಳಾದ ಲೂಸಿ, ರಾಬರ್ಟ್ ಹಾಗೂ ಟಿಮ್ ತಿಳಿಸಿದ್ದಾರೆ.

ಕಳೆದ ಹಲವಾರು ದಶಕಗಳಿಂದ ಅವರು ನಿಧಾನಗತಿಯಲ್ಲಿ ದೇಹವನ್ನು ಆಕ್ರಮಿಸುವ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಲೆರೋಸಿಸ್ (ಎಆರ್‌ಎಸ್) ಎಂಬ ನರಮಂಡಲವನ್ನು ಬಾಧಿಸುವ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದಾಗಿ ಅವರು ಹಂತಹಂತವಾಗಿ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ಅವರು ತಮ್ಮ ಕೆನ್ನೆಗೆ ಅಳವಡಿಸಲ್ಪಟ್ಟ ಮಾತುಗಳನ್ನು ಆಡುವ ಸಾಧನ (ಸ್ಪೀಚ್ ಜನರೇಟಿಂಗ್ ಡಿವೈಸ್) ಉಪಯೋಗಿಸಿ ಸಂವಹನವನ್ನು ನಡೆಸುತ್ತಿದ್ದರು.

ಬ್ಲ್ಯಾಕ್ ಹೋಲ್ ಗಳು ವಿಕಿರಣ ಸೂಸುತ್ತವೆ ಎಂದು ಅವರು ಸೈದ್ಧಾಂತಿಕವಾಗಿ ಸಾಧಿಸಿ ತೋರಿಸಿದ್ದರು. ಇದನ್ನು ಹಾಕಿಂಗ್ ರೇಡಿಯೇಶನ್ ಎನ್ನಲಾಗುತ್ತದೆ. ಅವರು ವಿಶ್ವವಿಜ್ಞಾನದ ಬಗ್ಗೆ ಸಿದ್ಧಾಂತವೊಂದನ್ನು ರೂಪಿಸಿದವರಲ್ಲಿ ಮೊದಲಿಗರಾಗಿದ್ದರಲ್ಲದೆ, ಸಾಪೇಕ್ಷತಾ ಸಿದ್ಧಾಂತ ಹಾಗೂ ಕ್ವಾಂಟಮ್ ಮೆಕಾನಿಕ್ಸ್ ಉಪಯೋಗಿಸಿ ಇದನ್ನು ನಿರೂಪಿಸಿದ್ದರು.

ಅವರು ಬರೆದಿದ್ದ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಬ್ರಿಟಿಷ್ ಸಂಡೇ ಟೈಮ್ಸ್ ಇದರ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News