ವಿಶ್ವ ಖುಷಿ ವರದಿ: ಕುಸಿದ ಭಾರತದ ಸ್ಥಾನ

Update: 2018-03-15 15:26 GMT

ವಿಶ್ವಸಂಸ್ಥೆ, ಮಾ. 15: ಖುಷಿಯಿಂದ ಬದುಕುತ್ತಿರುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತ 133ನೇ ಸ್ಥಾನ ಹೊಂದಿದೆ ಎಂದು ಬುಧವಾರ ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಭಾರತಕ್ಕೆ ಹೋಲಿಸಿದರೆ, ಭಯೋತ್ಪಾದನೆ ಪೀಡಿತ ಪಾಕಿಸ್ತಾನ ಮತ್ತು ಅತ್ಯಂತ ಬಡ ದೇಶ ನೇಪಾಳ ಹೆಚ್ಚು ಸಂತೋಷ ಹೊಂದಿವೆ!

 156 ದೇಶಗಳ ಪಟ್ಟಿಯಲ್ಲಿ ಭಾರತ ಈ ಹಿಂದೆ 122ನೆ ಸ್ಥಾನವನ್ನು ಹೊಂದಿತ್ತು. ಈ ಬಾರಿ ಅದು 11 ಸ್ಥಾನಗಳಷ್ಟು ಕುಸಿದಿದೆ ಹಾಗೂ ಹೆಚ್ಚಿನ ಸಾರ್ಕ್ ದೇಶಗಳಿಂದ ಹಿಂದಿದೆ. ಒಂದೇ ಒಂದು ಸಮಾಧಾನದ ವಿಷಯವೆಂದರೆ, ಭಾರತ ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಮುಂದಿದೆ!

ಮಾರ್ಚ್ 20ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಖುಷಿ ದಿನಕ್ಕೆ ಪೂರ್ವಭಾವಿಯಾಗಿ ವಾರ್ಷಿಕ ‘ವಿಶ್ವ ಖುಷಿ ವರದಿ’ಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.

8 ಸಾರ್ಕ್ ದೇಶಗಳ ಪೈಕಿ ಪಾಕಿಸ್ತಾನ 75ನೆ, ಭೂತಾನ್ 97ನೆ, ನೇಪಾಳ 101ನೇ, ಬಾಂಗ್ಲಾದೇಶ 115ನೇ ಮತ್ತು ಶ್ರೀಲಂಕಾ 116ನೇ ಸ್ಥಾನಗಳನ್ನು ಹೊಂದಿದೆ. ಅಫ್ಘಾನಿಸ್ತಾನ 145ನೇ ಸ್ಥಾನದಲ್ಲಿದೆ.

ಅಗ್ರ ಸ್ಥಾನದಲ್ಲಿ ಫಿನ್‌ಲ್ಯಾಂಡ್

ಪಟ್ಟಿಯಲ್ಲಿ ಫಿನ್‌ಲ್ಯಾಂಡ್ ಅಗ್ರ ಸ್ಥಾನದಲ್ಲಿದೆ. ಅಗ್ರ 10ರ ಪಟ್ಟಿಯಲ್ಲಿ ನಾರ್ವೆ, ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವಿಟ್ಸರ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ಕೆನಡ, ನ್ಯೂಝಿಲ್ಯಾಂಡ್, ಸ್ವೀಡನ್ ಮತ್ತು ಆಸ್ಟ್ರೇಲಿಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News