‘ವಿಕ್ರಂ ವೇದ’ ಹಿಂದಿ ರಿಮೇಕ್ ನಲ್ಲಿ ನಟಿಸಲಿರುವ ಇಬ್ಬರು ಸ್ಟಾರ್ ಗಳು ಯಾರು ಗೊತ್ತಾ?

Update: 2018-03-16 10:38 GMT

ಹೊಸದಿಲ್ಲಿ, ಮಾ.16: ಮಾಧವನ್, ವಿಜಯ್ ಸೇತುಪತಿ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ ‘ವಿಕ್ರಂ ವೇದ’ದ ಹಿಂದಿ ರಿಮೇಕ್ ರೈಟ್ಸ್ ನ್ನು ಶಾರೂಕ್ ಖಾನ್ ರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಖರೀದಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈ ಚಿತ್ರದ ರಿಮೇಕ್ ರೈಟ್ಸ್ ನ್ನು ನೀರಜ್ ಪಾಂಡೆ ಹಾಗು ರಿಲಾಯನ್ಸ್ ಎಂಟರ್ ಟೈನ್ ಮೆಂಟ್ ಖರೀದಿಸಿದೆ ಎನ್ನುವುದು ಈಗ ಖಚಿತವಾಗಿದೆ.

ಹಿಂದಿ ರಿಮೇಕ್ ಗಾಗಿ ನೀರಜ್ ಪಾಂಡೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಎನ್ನಲಾಗಿದೆ. ಹಿಂದಿ ಚಿತ್ರವನ್ನು ತಮಿಳು ವಿಕ್ರಂ ವೇದದ ನಿರ್ದೇಶಕರಾದ ಪುಷ್ಕರ್-ಗಾಯತ್ರಿ ಜೋಡಿ ನಿರ್ದೇಶಿಸಲಿದ್ದಾರೆ. ಇನ್ನು ಮಾಧವನ್, ವಿಜಯ್ ಸೇತುಪತಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ಹಾಗು ಸಿದ್ದಾರ್ಥ್ ಮಲ್ಹೋತ್ರಾ ನಟಿಸಲಿದ್ದಾರಂತೆ.

ನೀರಜ್ ಪಾಂಡೆ ಹಾಗು ಸಿದ್ಧಾರ್ಥ್ ಮಲ್ಹೋತ್ರಾ ಈ ಹಿಂದೆ ‘ಅಯ್ಯಾರಿ’ ಚಿತ್ರದಲ್ಲಿ ಜೊತೆಯಾಗಿದ್ದರು. ‘ಬ್ರದರ್ಸ್’ ಚಿತ್ರದ ನಂತರ ವಿಕ್ರಂ ವೇದ ರಿಮೇಕ್ ನಲ್ಲಿ ಅಕ್ಷಯ್ ಹಾಗು ಸಿದ್ದಾರ್ಥ್ ಜೊತೆಯಾಗಲಿದ್ದಾರೆ ಎನ್ನಲಾಗಿದೆ. ವಿಕ್ರಂ ವೇದದಲ್ಲಿನ ಸಿದ್ದಾರ್ಥ್ ಬದಲು ಮನೋಜ್ ಬಾಜಪೇಯಿ ಅಥವಾ ಸುಶಾಂತ್ ಸಿಂಗ್ ರಜಪೂತ್ ರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News