ರಾಫೆಲ್ ಒಪ್ಪಂದದಿಂದ 36,000 ಕೋ.ರೂ. ನಷ್ಟ: ರಾಹುಲ್

Update: 2018-03-16 16:53 GMT

ಹೊಸದಿಲ್ಲಿ, ಮಾ.16: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತಿಯೊಂದು ರಾಫೆಲ್ ಯುದ್ಧವಿಮಾನಕ್ಕೂ 1,100 ಕೋಟಿ ರೂ. ಹೆಚ್ಚುವರಿ ಪಾವತಿಸಿದೆ . ಇದರಿಂದ ದೇಶಕ್ಕೆ ಒಟ್ಟು 36,000 ಕೋಟಿ ರೂ. ನಷ್ಟವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರ ಪ್ರತೀ ರಾಫೇಲ್ ಯುದ್ಧವಿಮಾನಕ್ಕೆ 570 ಕೋಟಿ ರೂ.ಯಂತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಮೋದಿ ನೇತೃತ್ವದ ಸರಕಾರ ಪ್ರತೀ ಯುದ್ಧವಿಮಾನಕ್ಕೆ 1,670 ಕೋಟಿ ಪಾವತಿಸಲು ಒಪ್ಪಿಕೊಂಡಿದೆ . ಅಂದರೆ ಒಟ್ಟು 36,000 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅವರು ರಾಫೇಲ್ ಯುದ್ಧವಿಮಾನ ತಯಾರಿಸುವ ‘ದಸಾಲ್ಟ್’ ಸಂಸ್ಥೆಯ 2016ರ ವಾರ್ಷಿಕ ವರದಿಯನ್ನು ಉಲ್ಲೇಖಿಸಿ ಹೇಳಿದರು. ದೇಶದ ರಕ್ಷಣಾ ಬಜೆಟ್‌ನ ಶೇ.10ರಷ್ಟು ಹೆಚ್ಚುವರಿ ಪಾವತಿಸಸಲಾಗಿದೆ. ಆದರೆ ಇನ್ನೊಂದೆಡೆ ನಮ್ಮ ಯೋಧರು ಹಣಕ್ಕಾಗಿ ಸರಕಾರದ ಬಳಿ ಅಂಗಲಾಚುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News