×
Ad

ಘೌಟದಿಂದ ಸಾವಿರಾರು ಮಂದಿಯ ಪಲಾಯನ

Update: 2018-03-16 23:05 IST

ಆಡ್ರ (ಸಿರಿಯ), ಮಾ. 16: ಒಂದು ತಿಂಗಳ ಕಾಲ ನಡೆದ ನಿರಂತರ ಬಾಂಬ್ ದಾಳಿಗಳ ಬಳಿಕ, ಗುರುವಾರ ಸಾವಿರಾರು ನಾಗರಿಕರು ಸಿರಿಯದ ರಾಜಧಾನಿ ಡಮಾಸ್ಕಸ್‌ನ ಹೊರವಲಯದ ಪೂರ್ವ ಘೌಟದಿಂದ ಪಲಾಯನಗೈದರು.

ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ರ ಪಡೆಗಳು ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಘೌಟದ ಹೆಚ್ಚಿನ ಭಾಗಗಳನ್ನು ಈಗಾಗಲೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಪೂರ್ವ ಘೌಟದ 70 ಶೇಕಡ ಪ್ರದೇಶವನ್ನು ಈಗಾಗಲೇ ಬಶರ್ ಪಡೆಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಹಾಗೂ ಉಳಿದ ಭಾಗವನ್ನು ಮೂರು ಭಾಗಗಳಾಗಿ ವಿಂಗಡಿಸಿವೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಭೀಕರ ವಾಯು ಮತ್ತು ಭೂದಾಳಿಗಳ ಬಳಿಕ, ಸರಕಾರಿ ಪಡೆಗಳು ಗುರುವಾರ ಘೌಟದ ದಕ್ಷಿಣ ಭಾಗದಲ್ಲಿರುವ ಹಮ್ಮೂರಿಯೆ ಪಟ್ಟಣವನ್ನು ವಶಪಡಿಸಿಕೊಂಡವು.

ಆದರೆ, ಬಳಿಕ ಪ್ರತಿದಾಳಿ ನಡೆಸಿದ ಬಂಡುಕೋರರು ಪಟ್ಟಣದ ಕೆಲವು ಭಾಗಗಳನ್ನು ವಶಪಡಿಸಿಕೊಂಡರು ಹಾಗೂ 14 ಸರಕಾರಿ ಸೈನಿಕರನ್ನು ಹತೈಗೈದರು ಎಂದು ವೀಕ್ಷಣಾಲಯ ತಿಳಿಸಿದೆ.

 ಆದರೆ, ಇನ್ನೊಂದೆಡೆ ರಶ್ಯದ ಸೈನಿಕರು ಮತ್ತು ಯುದ್ಧ ವಿಮಾನಗಳ ಬೆಂಬಲದಿಂದ ಅಲ್-ರಿಹಾನ್ ಎಂಬ ಪಟ್ಟಣವನ್ನು ಸರಕಾರಿ ಪಡೆಗಳು ವಶಪಡಿಸಿಕೊಂಡಿವೆ.

ಗುರುವಾರ ಹಮ್ಮೂರಿಯೆ ಪಟ್ಟಣ ಸರಕಾರಿ ಪಡೆಗಳ ಕೈವಶವಾದ ಬಳಿಕ, ಮಹಿಳೆಯರು ಮತ್ತು ಮಕ್ಕಳು ಗುಂಪು ಗುಂಪಾಗಿ ಅಗತ್ಯ ಸಾಮಾನು ಸರಂಜಾಮುಗಳನ್ನು ಹಿಡಿದುಕೊಂಡು ಸರಕಾರದ ನಿಯಂತ್ರಣದ ಪ್ರದೇಶಗಳಿಗೆ ಪಲಾಯನಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News