‘ಝೋಯಾ ಫ್ಯಾಕ್ಟರ್’ಗೆ ದುಲ್ಕರ್ ಹೀರೋ
‘ಕ್ಯಾರವಾನ್’ ಬಿಡುಗಡೆಗೆ ಮುನ್ನವೇ ಮೊಲಿವುಡ್ ಸೂಪರ್‌ಸ್ಟಾರ್ ದುಲ್ಕರ್ ಸಲ್ಮಾನ್‌ಗೆ ಬಾಲಿವುಡ್‌ನಲ್ಲಿ ಇನ್ನೊಂದು ಚಿತ್ರ ಒಲಿದು ಬಂದಿದೆ. ಹೌದು. ಅಭಿಷೇಕ್ ಶರ್ಮಾ ನಿರ್ದೇಶಿಸಲಿರುವ ‘ರೆಯಾ ಫ್ಯಾಕ್ಟರ್’ಗೆ ಆತ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟಿ ಸೋನಮ್ ಕಪೂರ್ ಈ ಚಿತ್ರಕ್ಕೆ ಹೀರೋಯಿನ್. ಅನುಜಾ ಚೌಹಾಣ್ ಅವರ ಜನಪ್ರಿಯ ಕಾದಂಬರಿ ‘ರೆಯಾ ಫ್ಯಾಕ್ಟರ್’ನ್ನು ಆಧರಿಸಿ ಈ ಚಿತ್ರ ಮೂಡಿಬರಲಿದೆ.
ಚಿತ್ರದಲ್ಲಿ ನಾಯಕನಷ್ಟೇ ಹೀರೋಯಿನ್ ಪಾತ್ರ ಕೂಡಾ ಮಹತ್ವದ್ದಾಗಿದೆಯಂತೆ. ಜಾಹೀರಾತು ರಂಗದ ವೃತ್ತಿಪರ ಯುವತಿಯೊಬ್ಬಳು, ಭಾರತೀಯ ಕ್ರಿಕೆಟ್ ತಂಡದ ಗೆಲುವಿನ ರೂವಾರಿಯಾಗುವ ಕುತೂಹಲಕಾರಿ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ಕ್ರಿಕೆಟ್ ತಂಡದ ನಾಯಕನ ಜೊತೆ ಪ್ರೇಮಪಾಶಕ್ಕೆ ಬೀಳುವ ಯುವತಿ, ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲ್ಲಲು ಮಾರ್ಗದರ್ಶಕಳಾಗುವ ಕಥೆಯುಳ್ಳ ‘ರೆಯಾ ಫ್ಯಾಕ್ಟರ್’ ಬಗ್ಗೆ ಈಗಾಗಲೇ ಬಾಲಿವುಡ್‌ನಲ್ಲಿ ನಿರೀಕ್ಷೆಗಳು ಗರಿಗೆದರಿವೆ. ‘ರೆಯಾ ಫ್ಯಾಕ್ಟರ್’ನ ಕಥೆ ತನಗೆ ತುಂಬಾ ಇಷ್ಟವಾಗಿರುವುದಾಗಿ ದುಲ್ಕರ್ ಹೇಳಿಕೊಂಡಿದ್ದಾರೆ. ಕಾದಂಬರಿಯನ್ನು ಸಿನೆಮಾಗೆ ಆಳವಡಿಸಿರುವ ರೀತಿಯೂ ಅದ್ಭುತವಾಗಿದೆಯೆಂದು ಆತ ಹೇಳಿಕೊಂಡಿದ್ದಾರೆ. ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುವ ಸಂತಸ ಕೂಡಾ ಇದೆ ಎಂದು ಆತ ಹೇಳಿದ್ದಾರೆ.
ಕ್ಯಾರವಾನ್ ಬಿಡುಗಡೆಗೆ ತುದಿಗಾಲಲ್ಲಿ ಕಾದಿರುವ ದುಲ್ಕರ್ ಅಭಿಮಾನಿಗಳಿಗೆ, ‘ರೆಯಾ ಫ್ಯಾಕ್ಟರ್’ನಲ್ಲಿ ತಮ್ಮ ಮೆಚ್ಚಿನ ನಟ ನಟಿಸಲಿರುವುದು ಅಚ್ಚರಿಯ ಜೊತೆ ಸಂತಸವನ್ನೂ ತಂದಿದೆ.
‘ರೆಯಾ ಫ್ಯಾಕ್ಟರ್’ ಆಗಸ್ಟ್‌ನಲ್ಲಿ ಸೆಟ್ಟೇರಲಿದ್ದು, ಮಂದಿನ ವರ್ಷದ ಏಪ್ರಿಲ್‌ಗೆ ಬಿಡುಗಡೆಯಾಗಲಿದೆ.