ಸಂಭಾವನೆಯಲ್ಲೂ ಅನುಷ್ಕಾ ಶೆಟ್ಟಿ ದಾಖಲೆ

Update: 2018-03-17 05:05 GMT

ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟಿ ಯಾರು ಗೊತ್ತೇ?. ಮತ್ತ್ಯಾರೂ ಅಲ್ಲ, ಅರುಂಧತಿ, ಬಾಹುಬಲಿ ಸರಣಿಯ ಸೂಪರ್ ಡ್ಯೂಪರ್ ಹಿಟ್ ಚಿತ್ರಗಳ ನಾಯಕಿ ಅನುಷ್ಕಾ ಶೆಟ್ಟಿ. ಇನ್ನಷ್ಟೇ ಸೆಟ್ಟೇರಬೇಕಾದ ಹೊಸ ಚಿತ್ರವೊಂದಕ್ಕೆ ಅನುಷ್ಕಾ ಶೆಟ್ಟಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ದಕ್ಷಿಣ ಭಾರತದ ಮಟ್ಟಿಗೆ ಈ ಹಿಂದೆ ಯಾವುದೇ ನಟಿಯೂ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದಿರಲಿಲ್ಲವಂತೆ. ಬಾಹುಬಲಿ 2 ಚಿತ್ರದ ಪ್ರಚಂಡ ಯಶಸ್ಸಿನ ಬೆನ್ನಲ್ಲೇ, ಅನುಷ್ಕಾ ನಟಿಸಿದ ‘ಬಾಗ್‌ಮತಿ’ ಕೂಡಾ ಭರ್ಜರಿ ಹಿಟ್ ಆಗಿರುವುದರಿಂದ ಆಕೆಯ ಇಮೇಜ್ ಇನ್ನಷ್ಟು ಹೆಚ್ಚಿಸಿದೆ. ಒಂದರ ಬೆನ್ನಲ್ಲೇ ಇನ್ನೊಂದು ಭರ್ಜರಿ ಅವಕಾಶಗಳು ಅನುಷ್ಕಾರನ್ನು ಅರಸಿಕೊಂಡು ಬರುತ್ತಿದ್ದು, ಆಕೆ ತನ್ನ ಸಂಭಾವನೆಯನ್ನು ಹೆಚ್ಚಿಸಿದುದರಲ್ಲಿ ಅಚ್ಚರಿಯೇನಿಲ್ಲ.

ಈವರೆಗೆ ದಕ್ಷಿಣ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆದ ನಟಿಯೆಂಬ ಹೆಗ್ಗಳಿಕೆ ನಯನ್‌ತಾರಾ ಪಾಲಾಗಿತ್ತು. ಡೋರಾ, ಅರ್ರಂ, ವೇಲೈಕ್ಕಾರನ್‌ನಂತಹ ಸೂಪರ್‌ಹಿಟ್ ಚಿತ್ರಗಳ ಬಳಿಕ ತಮಿಳಿನಲ್ಲಿ ನಂ.1 ಪಟ್ಟಕ್ಕೇರಿದ ನಯನ್ಸ್, ತೆಲುಗುಚಿತ್ರವೊಂದರಲ್ಲಿ ನಟಿಸಲು 4 ಕೋಟಿ ರೂ. ಸಂಭಾವನೆ ಪಡೆದಿರುವುದು ಸುದ್ದಿಯಾಗಿತ್ತು. ಇದೀಗ ಅನುಷ್ಕಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 5 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಹೊಸ ದಾಖಲೆ ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News