ಅಮೆರಿಕದಲ್ಲೂ 'ಟಗರು' ಅಬ್ಬರ

Update: 2018-03-18 08:59 GMT

ದುನಿಯಾ ಸೂರಿ ನಿರ್ದೇಶನದ ‘ಟಗರು’ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ರಾಜ್ಯದೆಲ್ಲೆಡೆ ಚಿತ್ರಮಂದಿರಗಳಲ್ಲಿ ಹೌಸ್‌ಪುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಬಿಡುಗಡೆಯಾಗಿ ಎರಡೂ ವಾರಗಳ ಬಳಿಕವೂ‘‘ಟಗರು’’ ಇನ್ನಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಬಾಕ್ಸ್‌ಆಫೀಸ್‌ನಲ್ಲಿ ‘ಟಗರು’ವಿನ ನಾಗಾಲೋಟ ಮೂರ್ನಾಲ್ಕು ವಾರ ಹೀಗೆಯೇ ಮುಂದುವರಿದಲ್ಲಿ ಚಿತ್ರದ ಗಳಿಕೆ 50 ಕೋಟಿ ರೂ.ಗಡಿಯನ್ನು ದಾಟುವುದರಲ್ಲಿ ಸಂದೇಹವಿಲ್ಲವೆನ್ನಲಾಗಿದೆ. ಈ ಮಧ್ಯೆ ‘ಟಗರು’ ವಿದೇಶದಲ್ಲೂ ವಿಜಯಪತಾಕೆ ಹಾರಿಸಲು ಹೊರಟಿದೆ. ಅಮೆರಿಕದಲ್ಲಿ ಮಾರ್ಚ್ 8ರಂದು ಬಿಡುಗಡೆಗೊಂಡಿರುವ ‘ಟಗರು’ ಚಿಕಾಗೋ, ಫಿಲಡೆಲ್ಫಿಯಾ, ಅಟ್ಲಾಂಟಾ ಸೇರಿದಂತೆ 25ಕ್ಕೂ ಅಧಿಕ ನಗರಗಳಲ್ಲಿ ತೆರೆಕಂಡಿದೆ. ಚಿತ್ರದ ನಾಯಕ ಹ್ಯಾಟ್ರಿಕ್ ಹೀರೋ ಶಿವರಾಜ್ ಅಭಿನಯಕ್ಕೆ ಈಗಾಗಲೇ ಪ್ರೇಕ್ಷಕರು, ವಿಮರ್ಶಕರಿಂದ ಮುಕ್ತಕಂಠದ ಪ್ರಶಂಸೆ ದೊರೆತಿದ್ದರೆ, ವಿಲನ್ ಪಾತ್ರದಲ್ಲಿ ಧನಂಜಯ್ ಅಭಿನಯಕ್ಕೂ ಶಹಬ್ಬಾಸ್‌ಗಿರಿ ದೊರೆತಿದೆ.

ವಶಿಷ್ಠ ಸಿಂಹ, ಭಾವನಾ, ಮಾನ್ವಿತ ಮತ್ತಿತರರು ನಟಿಸಿರುವ ‘ಟಗರು’ ಚಿತ್ರದ ಯಶಸ್ಸು ಸ್ಯಾಂಡಲ್‌ವುಡ್‌ಗೆ ಹೊಸ ಚೈತನ್ಯ ತುಂಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News