×
Ad

ರೊಹಿಂಗ್ಯಾ ಶಿಬಿರಗಳ ಸ್ಥಿತಿಗತಿ ವರದಿ ನೀಡಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2018-03-19 19:23 IST

ಹೊಸದಿಲ್ಲಿ, ಮಾ. 19: ವಿವಿಧ ರಾಜ್ಯಗಳಲ್ಲಿ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳ ಸ್ಥಿತಿಗತಿ ವಿವರ ಒಳಗೊಂಡ ‘ಸಮಗ್ರ ಸ್ಥಿತಿಗತಿ ವರದಿ’ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

 ಶಿಬಿರಗಳು ಅನಾರೋಗ್ಯಕರ ಹಾಗೂ ಕನಿಷ್ಠ ಹೇಳಲು ಕೂಡ ಅಸಹ್ಯಕರವಾಗುವ ಸ್ಥಿತಿಯಲ್ಲಿ ಇದೆ ಎಂದು ಹಿರಿಯ ನ್ಯಾಯವಾದಿ ಕೋಲಿನ್ ಗೊನ್ಸಾಲ್ವಸ್ ಪ್ರತಿಪಾದನೆಯನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಅಂಗೀಕರಿಸಿತು.

ದೂರುದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಝಪ್ಫರ್ ಉಲ್ಲಾಹ್, ಕೇಂದ್ರ ಹಾಗೂ ರಾಜ್ಯಗಳಾದ ಹರ್ಯಾಣ, ರಾಜಸ್ಥಾನ, ಜಮ್ಮುಕಾಶ್ಮೀರದಲ್ಲಿರುವ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದರು.

ಅನೈರ್ಮಲ್ಯದಿಂದ ಈ ಶಿಬಿರಗಳಲ್ಲಿ ಇತ್ತೀಚೆಗೆ ಹಲವು ಸಾವುಗಳು ಸಂಭವಿಸಿವೆ ಎಂದು ಮನವಿ ಹೇಳಿದೆ.

ಮ್ಯಾನ್ಮಾರ್‌ನ ಪಶ್ಚಿಮ ರಖೈನ್ ರಾಜ್ಯದಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ರೊಹಿಂಗ್ಯಾ ಮುಸ್ಲಿಮರು ಭಾರತಕ್ಕೆ ವಲಸೆ ಬಂದು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರಪ್ರದೇಶ ದಿಲ್ಲಿ-ಎನ್‌ಸಿಆರ್ ಹಾಗೂ ರಾಜಸ್ಥಾನಗಳ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News