×
Ad

ಥಾಣೆಯಲ್ಲಿ ಗುಜರಾತಿ ನಾಮಫಲಕಗಳ ವಿರುದ್ಧ ಎಂಎನ್‌ಎಸ್ ದಾಳಿ

Update: 2018-03-19 19:30 IST

ಥಾಣೆ,ಮಾ.19: ಥಾಣೆ ಜಿಲ್ಲೆಯ ವಸಯಿ ಪ್ರದೇಶದಲ್ಲಿ ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿಯ 20ಕ್ಕೂ ಅಧಿಕ ಗುಜರಾತಿ ನಾಮಫಲಕಗಳನ್ನು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್‌ಎಸ್)ಯ ಕಾರ್ಯಕರ್ತರು ರವಿವಾರ ತಡರಾತ್ರಿ ಧ್ವಂಸಗೊಳಿಸಿದ್ದಾರೆ.

ವಸಯಿ ಮತ್ತು ಥಾಣೆ ಜಿಲ್ಲೆ ಮಹಾರಾಷ್ಟ್ರದಲ್ಲಿವೆಯೇ ಹೊರತು ಗುಜರಾತ್‌ನಲ್ಲಿಲ್ಲ. ಗುಜರಾತಿ ನಾಮಫಲಕಗಳನ್ನು ನಾವಿನ್ನು ಮುಂದೆ ಸಹಿಸುವುದಿಲ್ಲ ಎಂದು ಎಂಎನ್‌ಎಸ್‌ನ ಥಾಣೆ ಪ್ರದೇಶ ಅಧ್ಯಕ್ಷ ಅವಿನಾಶ್ ಜಾಧವ್ ಅವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಇಂತಹ ನಾಮಫಲಕಗಳ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರಿ ಯುತ್ತದೆ ಎಂದು ಅವರು ಒತ್ತಿ ಹೇಳಿದರು.

 ವಸಯಿ ಪೊಲೀಸರು ಘಟನೆಯನ್ನು ದೃಢಪಡಿಸಿದ್ದಾರಾದರೂ, ಈ ವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟು ಮತ್ತು 2019ರ ವೇಳೆಗೆ ‘ಮೋದಿ ಮುಕ್ತ ಭಾರತ ’ಕ್ಕೆ ರಾಜ್ ಠಾಕ್ರೆ ಕರೆ ನೀಡಿದ ಎರಡು ದಿನಗಳ ಬಳಿಕ ಈ ದಾಳಿ ನಡೆದಿದೆ.

ಕಳೆದ ವರ್ಷದ ಜುಲೈನಲ್ಲಿಯೂ ಎಂಎನ್‌ಎಸ್ ಕಾರ್ಯಕರ್ತರು ಮುಂಬೈನ ದಾದರ್ ಮತ್ತು ಮಾಹಿಮ್ ಪ್ರದೇಶಗಳಲ್ಲಿಯ ಗುಜರಾತಿ ನಾಮಫಲಕಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News