×
Ad

ಲೈಂಗಿಕ ಕಿರುಕುಳದ ಆರೋಪ ಹೊತ್ತ ಜೆಎನ್ ಯು ಪ್ರೊಫೆಸರ್ ಬಂಧನ, ಜಾಮೀನು

Update: 2018-03-20 19:59 IST

ಹೊಸದಿಲ್ಲಿ, ಮಾ.20: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಜೆಎನ್ ಯು ಪ್ರೊಫೆಸರ್ ಅತುಲ್ ಜೋಹ್ರಿಯವರನ್ನು ಪೊಲೀಸರು ಬಂಧಿಸಿದ್ದು, ನಂತರ ಅವರಿಗೆ ಜಾಮೀನು ಲಭಿಸಿದೆ.

ಲೈಂಗಿಕ ಕಿರುಕುಳ ಆರೋಪದಲ್ಲಿ ಕನಿಷ್ಠ 9 ಮಹಿಳೆಯರು ಅತುಲ್ ವಿರುದ್ಧ ದೂರು ನೀಡಿದ್ದರು. ಪ್ರೊಫೆಸರ್ ನಮ್ಮ ಬಟ್ಟೆಯ ಬಗ್ಗೆ ಅಸಭ್ಯ ಭಾಷೆ ಬಳಸುತ್ತಿದ್ದಾರೆ ಹಾಗು ತರಗತಿ ನಡೆಸುವಾಗ ಅಸಭ್ಯವಾಗಿ ಸ್ಪರ್ಶಿಸುತ್ತಾರೆ ಎಂದು ವಸಂತ್ ಕುಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು.

ಪ್ರೊಫೆಸರ್ ಬಂಧನಕ್ಕೆ ಆಗ್ರಹಿಸಿ ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ನಿನ್ನೆ ಜೆಎನ್ ಯು ಸ್ಟೂಡೆಂಟ್ ಯುನಿಯನ್ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಹಮ್ಮಿಕೊಂಡ ಜಾಥಾದ ಸಂದರ್ಭ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News