ಪಿಎಂಎಲ್‌ಎ ಪ್ರಕರಣ: ನೀರವ್ ಪರೋಕ್ಷವಾಗಿ ಪ್ರಶ್ನಿಸಲಿದ್ದಾರೆ: ಇಡಿ

Update: 2018-03-20 16:09 GMT

ಹೊಸದಿಲ್ಲಿ, ಮಾ. 20: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನೀರವ್ ಮೋದಿ, ಹಗರಣಕ್ಕೆ ಸಂಬಂಧಿಸಿ ದಾಖಲಿಸಲಾದ ಹಣ ವಂಚನೆ ಪ್ರಕರಣವನ್ನು ‘ಪರೋಕ್ಷವಾಗಿ’ ಪ್ರಶ್ನಿಸಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ನೀರವ್ ಮೋದಿ ತನ್ನ ಕಂಪೆನಿ ಫೈರ್‌ಸ್ಟಾರ್ ಡೈಮಂಡ್ಸ್ ಕಂಪೆನಿ ಮೂಲಕ ಪರೋಕ್ಷವಾಗಿ ಈ ಪ್ರಕರಣವನ್ನು ಪ್ರಶ್ನಿಸಲಿದ್ದಾರೆ ಎಂದು ನ್ಯಾಯಮೂರ್ತಿ ಎಸ್. ಮುರಳೀಧರ್ ಹಾಗೂ ಐಎಸ್ ಮೆಹ್ತಾ ಮುಂದೆ ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದೆ. ಜಾರಿ ನಿರ್ದೇಶನಾಲಯದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂದೀಪ್ ಸೇಥಿ, ತಲೆಮರೆಸಿ ಕೊಂಡಿರುವ ನೀರವ್ ಮೋದಿ ತನ್ನ ಕಂಪೆನಿ ಮೂಲಕ ಮನವಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News