ಮಕ್ಕಾದ ಮಸೀದಿಯನ್ನು ಮಕ್ಕೇಶ್ವರ ಮಂದಿರ ಎಂದ ಹಿಂದೂ ಮಹಾಸಭಾ!

Update: 2018-03-20 16:43 GMT

ಆಗ್ರಾ,ಮಾ.20: ಅಲಿಗಡ ಹಿಂದೂ ಮಹಾಸಭಾ ಇತ್ತೀಚಿಗೆ ಬಿಡುಗಡೆಗೊಳಿಸಿರುವ ವಿವಾದಾತ್ಮಕ ಹಿಂದೂ  ಹೊಸವರ್ಷದ ಕ್ಯಾಲೆಂಡರ್‌ನಲ್ಲಿ ತಾಜ್‌ಮಹಲ್ ಸೇರಿದಂತೆ ಮುಘಲರ ಕಾಲದ ಏಳು ಮಸೀದಿಗಳು ಮತ್ತು ಸ್ಮಾರಕಗಳನ್ನು ಹಾಗೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮಕ್ಕಾದ ಮಸೀದಿಯನ್ನು ಹಿಂದು ದೇಗುಲಗಳು ಎಂದು ಉಲ್ಲೇಖಿಸಲಾಗಿದೆ.

 ತಾಜ್‌ಮಹಲ್‌ನ್ನು ‘ತೇಜೋಮಹಾಲಯಮಂದಿರ’ ವೆಂದು ಉಲ್ಲೇಖಿಸಿದ್ದರೆ, ಮಕ್ಕಾದ ಮಸೀದಿಯನ್ನು ‘ಮಕ್ಕೇಶ್ವರಮಹಾದೇವಮಂದಿರ’ವೆಂದು ಬಣ್ಣಿಸಲಾಗಿದೆ. ಇದೇರೀತಿ ಮಧ್ಯಪ್ರದೇಶದ ಕಮಲ್ ವೌಲಾಮಸೀದಿಯನ್ನು ‘ಭೋಜಶಾಲಾ’ ಮತ್ತು ಕಾಶಿಯ ಜ್ಞಾನವ್ಯಾಪಿ ಮಸೀದಿಯನ್ನು ‘ವಿಶ್ವನಾಥ ಮಂದಿರ‘ವೆಂದು ಉಲ್ಲೇಖಿಸಲಾಗಿದೆ. ದಿಲ್ಲಿಯ ಕುತುಬ್ ಮಿನಾರ್ ‘ವಿಷ್ಣು ಸ್ತಂಭ’ವಾದರೆ, ಜಾನಪುರದ ಅತಾಲಾಮಸೀದಿಯು ‘ಅತ್ಲಾ ದೇವಿಮಂದಿರ’ವಾಗಿದೆ. ಅಯೋಧ್ಯೆಯ ಬಾಬರಿ ಮಸೀದಿ ‘ರಾಮ ಜನ್ಮಭೂಮಿ’ಯ ಹಣೆಪಟ್ಟಿಯನ್ನು ಹಚ್ಚಲಾಗಿದೆ.

 ಹಿಂದೂ ಹೊಸವರ್ಷದ ಆರಂಭವಾದ ಯುಗಾದಿಯಂದು ನಾವು ಹವನ ವಿಧಿಗಳನ್ನು ನಡೆಸಿದ್ದೇವೆಮತ್ತು ಈ ದೇಶವನ್ನು ಹಿಂದುರಾಷ್ಟ್ರವನ್ನಾಗಿಸುವ ನಿರ್ಣಯವನ್ನು ಕೈಗೊಂಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಹಿಂದೂಮಹಾಸಭಾದ ರಾಷ್ಟ್ರೀಯಕಾರ್ಯದರ್ಶಿ ಪೂಜಾಶಕುನ್ ಪಾಂಡೆಅವರು, ಸರಕಾರವು ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುತ್ತದೆ ಮತ್ತು ಭಾರತವನ್ನು ಹಿಂದೂರಾಷ್ಟ್ರವನ್ನಾಗಿಘೋಷಿಸುತ್ತದೆ ಎಂದು ಆಶಿಸಿರುವುದಾಗಿ ತಿಳಿಸಿದರು.

ಹಿಂದು ಧಾರ್ಮಿಕ ಸ್ಥಳಗಳನ್ನು ಕೊಳ್ಳೆಹೊಡೆದ ಮುಸ್ಲಿಮರು ಅವುಗಳ ಹೆಸರುಗಳನ್ನು ಬದಲಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರು.ಅವರು ಅವುಗಳನ್ನು ಈಗ ಹಿಂದೂಗಳಿಗೆ ಮರಳಿಸಬೇಕು ಮತ್ತು ಹೊಸಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಿರುವಂತೆ ಅವುಗಳ ಮೂಲಹೆಸರುಗಳನ್ನು ಮರುನಾಮಕರಣ ಮಾಡಲಾಗುವುದು ಎಂದರು.

ಈ ಏಳು ಧಾರ್ಮಿಕಸ್ಥಳಗಳು ಹಿಂದುಗಳಿಗೆಸೇರಿದ್ದು ಎನ್ನುವುದನ್ನು ವಾಸ್ತವಾಂಶಗಳುಶಂಕೆಗೆಎಡೆಇಲ್ಲದಂತೆ ಸಾಬೀತುಗೊಳಿಸಬಲ್ಲವು.ಯಾವುದೇ ವಿವಾದವಿದ್ದರೆ ರಾಮಮಂದಿರ ಪ್ರಕರಣದಲ್ಲಿಯಂತೆ ಉತ್ಖನನಗಳನ್ನು ನಡೆಸಬೇಕುಮತ್ತು ಆಗ ಸಾಕ್ಷಾಧಾರಗಳು ದೊರೆಯಲಿವೆ ಎಂದು ಅಲಿಗಡದ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರೊಫೆಸರ್, ಇತಿಹಾಸ ತಜ್ಞ ಬಿ.ಪಿ.ಸಕ್ಸೇನಾ ಹೇಳಿದರು.

ಹಿಂದೂಮಹಾಸಭಾದ ಈ ಹೇಳಿಕೆಗೆಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವೆಲ್ಲ ನಿರಾಧಾರ ಹೇಳಿಕೆಗಳು.ಮಕ್ಕಾದ ಪವಿತ್ರತಾಣವನ್ನು ಹಿಂದೂಮಂದಿರ ಎಂದು ಬಣ್ಣಿಸುವುದರ ಉದ್ದೇಶ ಮುಸ್ಲಿಮರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿದೆ ಮತ್ತು ಇದು ಜಾತ್ಯತೀತತೆಯ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅಖಿಲಭಾರತ ಮುಸ್ಲಿಂ ವೈಯಕ್ತಿಕ ಕಾನೂನುಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಇಮಾಮ್-ಎ-ಈದ್ಗಾ ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಅವರು ಹೇಳಿದರು.ಈ ಜನರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕೋಮುಸೌಹಾರ್ದವನ್ನು ಅನಗತ್ಯವಾಗಿ ಹಾಳುಮಾಡುತ್ತಿದ್ದಾರೆ ಮತ್ತು ದ್ವೇಷವನ್ನು ಹರಡುತ್ತಿರುವುದಕ್ಕಾಗಿ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪಾಕಿಸ್ತಾನದ ಹಫೀಝ್ ಮುಹಮ್ಮದ್ ಸಯೀದ್‌ಗೂ ಮತ್ತು ದೇಶವನ್ನು ಹಾಳುಮಾಡುವಉದ್ದೇಶವನ್ನು ಮಾತ್ರಹೊಂದಿರುವ ಈ ಜನರಿಗೂ ಯಾವುದೇವ್ಯತ್ಯಾಸವಿಲ್ಲ.ಇದುಎರಡುಸಮುದಾಯಗಳಮಧ್ಯೆ ಬಿರುಕನ್ನು ಮೂಡಿಸುವ ಪ್ರಯತ್ನವಾಗಿದೆಎಂದುಹೇಳಿದಅಲಿಗಡದಮಾಜಿ ಶಾಸಕ ಝಮೀರುಲ್ಲಾ ಖಾನ್ ಅವರು, ಒಡೆದುಆಳುವ ನೀತಿಯನ್ನು ನಂಬಿರುವ ಸರಕಾರದ ನಿರ್ದೇಶದಮೇರೆಗೆಇದೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News