3ನೇ ಒಲಿಂಪಿಕ್ಸ್ ಕನಸು ಈಡೇರಲು ಕಾಮನ್‌ವೆಲ್ತ್ ಗೇಮ್ಸ್ ಮೊದಲ ಹೆಜ್ಜೆ: ಸುಶೀಲ್

Update: 2018-03-20 18:45 GMT

ಹೊಸದಿಲ್ಲಿ, ಮಾ.20: ನನಗೆ ಏನೂ ಸಾಬೀತುಪಡಿಸಲು ಬಾಕಿ ಉಳಿದಿಲ್ಲ. ಆದರೆ, ಇನ್ನೂ ಕೆಲವು ಬಾಕಿಯಿದೆ. ಮುಂದಿನ ತಿಂಗಳು ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಈಡೇರಿಸಿಕೊಳ್ಳಲು ಇರುವ ಮೊದಲ ಹೆಜ್ಜೆಯಾಗಿದೆ ಎಂದು ಭಾರತದ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಹೇಳಿದ್ದಾರೆ. ಎರಡು ಬಾರಿಯ ಹಾಲಿ ಚಾಂಪಿಯನ್ 34ರ ಹರೆಯದ ಸುಶೀಲ್ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ ಬೆಳ್ಳಿ ಜಯಿಸಿದ್ದಾರೆ. ‘‘ನಾನು ಕುಸ್ತಿ ಕಣಕ್ಕೆ ಮೊದಲ ಬಾರಿ ಇಳಿದಾಗ ದೇಶವನ್ನು ಪ್ರತಿನಿಧಿಸುವುದು ಮೊದಲ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇನೆ. ಕುಸ್ತಿಕಣದಲ್ಲಿ ಶೇ.100ರಷ್ಟು ಶ್ರಮಪಟ್ಟಿದ್ದೇನೆ. ಜನರ ಮನಸ್ಸನ್ನು ಬದಲಿಸಲು ನನ್ನಿಂದ ಸಾಧ್ಯವಿಲ್ಲ. ನಾನು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ’’ ಎಂದು ಸುಶೀಲ್ ಹೇಳಿದ್ದಾರೆ.

ಸುಶೀಲ್ ಕುಮಾರ್ ಈಗಾಗಲೇ ಗೋಲ್ಡ್‌ಕೋಸ್ಟ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ. ವಿವಾದಕ್ಕೆ ಕಾರಣವಾದ ಟ್ರಯಲ್ಸ್ ನಲ್ಲಿ ಸುಶೀಲ್ ಅವರು ಪ್ರವೀಣ್ ರಾಣಾ ವಿರುದ್ಧ ಜಯ ಸಾಧಿಸಿದ್ದರು. ಸುಶೀಲ್ ಜಯ ಸಾಧಿಸಿದ ಬೆನ್ನಿಗೇ ಅವರ ಬೆಂಬಲಿಗರು ರಾಣಾ ಬೆಂಬಲಿಗರಿಗೆ ಹಲ್ಲೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News