ಸೂಜಿ ಎಸೆದು ಗಾಜಿನ ಫಲಕ ಭೇದಿಸಿದ ಫೆಯಿ

Update: 2018-03-20 18:48 GMT

ಸೂಜಿ ಎಸೆದು ಗಾಜಿನ ಫಲಕವನ್ನು ರಂಧ್ರ ಮಾಡಲು ಸಾಧ್ಯವೇ? ಇನ್ನೊಂದು ಬದಿಯಲ್ಲಿರುವ ಬಲೂನ್ ಅನ್ನು ಒಡೆಯಲು ಸಾಧ್ಯವೇ? ಬಲ ಹಾಗೂ ನಿಖರತೆಯಿಂದ ಇದನ್ನು ಮಾಡಲು ಸಾಧ್ಯ ಎನ್ನುತಾ್ತರೆ ಶಾವೋಲಿನ್ ಬಿಕ್ಕು ಫೆಂಗ್ ಫೆಯಿ.
ಇತ್ತೀಚೆಗೆ ಫೆಯಿ ತನ್ನ ಸಾಮರ್ಥ್ಯ ಪ್ರದರ್ಶಿಸಿದರು. ಅವರು ಎಸೆದ ಸೂಜಿ ಗಾಜಿನ ಫಲಕವನ್ನು ರಂಧ್ರ ಮಾಡಿ ಅದರ ಆಚೆಗೆ ಇದ್ದ ಬಲೂನ್ ಅನ್ನು ಒಡೆದು ಹಾಕಿತು. ಈ ಪ್ರದರ್ಶನದ ವೀಡಿಯೊ ಈಗ ಯು ಟ್ಯೂಬ್‌ನಲ್ಲಿ ಅಸಂಖ್ಯಾತ ವೀಕ್ಷಕರು ನೋಡಿ ಅಚ್ಚರಿಪಟ್ಟುಕೊಂಡಿದ್ದಾರೆ.


 ಈ ಅತಿ ವೇಗದ ತಂತ್ರವನ್ನು ನಿಧಾನ ಗತಿಯ ದೃಶ್ಯಗಳಲ್ಲಿ ನೋಡಿದಾಗ ಸೂಚಿ ಗಾಜಿನ ಫಲಕದೊಳಗೆ ತೂರಿದಂತೆ ಕಾಣುತ್ತದೆ. ಆದರೆ, ಇನ್ನೊಂದೆಡೆ ಅದು ಕೇವಲ ಗಾಜಲ್ಲಿ ಬಿರುಕು ಮೂಡಿಸಿದಂತೆ ಮಾತ್ರ ಕಾಣುತ್ತದೆ. ಈ ಬಿರುಕಿನ ಕಾರಣಕ್ಕೆ ಸಿಡಿಯುವ ಗಾಜಿನ ಚೂರುಗಳು ಬಲೂನ್ ಒಡೆಯಲು ಕಾರಣವೇ?
 ಗಾಜಿನ ಫಲಕದ ಖಚಿತ ದ್ರವ್ಯರಾಶಿ, ದಪ್ಪ, ಒಳಗೊಂಡ ರಾಸಾಯನಿಕಗಳು ಹಾಗೂ ಸೂಜಿಯ ಬಗ್ಗೆ ಅರಿಯದೆ ಸೂಜಿ ಎಷ್ಟು ವೇಗವಾಗಿ ಚಲಿಸುತ್ತದೆ ಹಾಗೂ ಫೆಯಿ ಎಷ್ಟು ಪ್ರಮಾಣದ ಬಲ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಇಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಚಾರವೆಂದರೆ, ಮರ ಹಾಗೂ ಲೋಹದ ರೀತಿಯಲ್ಲೇ ಗಾಜಿನ ಫಲಕಕ್ಕೆ ಸೂಜಿ ಎಸೆದು ಭೇದಿಸುವುದು ಅಷ್ಟು ಸುಲಭವಲ್ಲ.
 

Writer - * ವಿಸ್ಮಯ

contributor

Editor - * ವಿಸ್ಮಯ

contributor

Similar News