×
Ad

ಇಸ್ರೇಲ್ ಸೇನಾ ನ್ಯಾಯಾಲಯದಿಂದ ಅಪ್ರಾಪ್ತರ ಹಕ್ಕು ಉಲ್ಲಂಘನೆ: ಎನ್‌ಜಿಒ ಆರೋಪ

Update: 2018-03-21 22:45 IST

ಜೆರುಸಲೇಂ, ಮಾ. 21: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಇಸ್ರೇಲ್‌ನ ಸೇನಾ ನ್ಯಾಯಾಲಯ ವ್ಯವಸ್ಥೆಗೆ ಸುಧಾರಣೆಗಳನ್ನು ತರಲಾಗಿದೆಯಾದರೂ, ಫೆಲೆಸ್ತೀನ್‌ನ ಅಪ್ರಾಪ್ತರ ಹಕ್ಕುಗಳ ‘ವ್ಯವಸ್ಥಿತ ಉಲ್ಲಂಘನೆ’ಯನ್ನು ತಡೆಯುವಲ್ಲಿ ಅದು ವಿಫಲವಾಗಿದೆ ಎಂದು ಇಸ್ರೇಲ್‌ನ ಸರಕಾರೇತರ ಸಂಘಟನೆಯೊಂದು ಮಂಗಳವಾರ ಹೇಳಿದೆ.

ಅಪ್ರಾಪ್ತರ ಹಕ್ಕುಗಳ ರಕ್ಷಣೆಯನ್ನು ಸುಧಾರಿಸುವ ಘೋಷಿತ ಧ್ಯೇಯದೊಂದಿಗೆ 2009ರಲ್ಲಿ ಸ್ಥಾಪಿಸಲಾಗಿರುವ ನಿಯೋಜಿತ ಸೇನಾ ಬಾಲ ನ್ಯಾಯಾಲಯವು ತನ್ನ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಗಿದೆ ಎಂದು ಮಾನವಹಕ್ಕುಗಳ ಗುಂಪು ‘ಬಿ ಟೆಸಲಿಮ್’ ಹೇಳಿದೆ.

 ‘‘ಸೇನಾ ನ್ಯಾಯಾಲಯ ವ್ಯವಸ್ಥೆಯಲ್ಲಿ ಮಾಡಲಾದ ಬದಲಾವಣೆಗಳು ತೋರಿಕೆಗೆ ಮಾತ್ರ. ಅವುಗಳು ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ’’ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮತ್ತು ‘ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್‌ನ್ಯಾಶನಲ್’ನ ಅಧ್ಯಯನಗಳನ್ನು ಉಲ್ಲೇಖಿಸಿ ಅದರ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News