ಭಯೋತ್ಪಾದನೆ ದಮನಕ್ಕೆ ಪಾಕ್‌ನಿಂದ ಹೆಚ್ಚಿನ ಕ್ರಮ ಅಗತ್ಯ: ಅಮೆರಿಕ

Update: 2018-03-21 18:11 GMT

  ವಾಶಿಂಗ್ಟನ್, ಮಾ. 21: ತನ್ನ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲಗೊಳಿಸಲು ಪಾಕಿಸ್ತಾನ ಇನ್ನೂ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗಿದೆ ಹಾಗೂ ಅದು ಕೇವಲ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಸಾಲದು, ಇತರ ಭಯೋತ್ಪಾದಕ ಗುಂಪುಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅಮೆರಿಕ ಹೇಳಿದೆ.

ಕಳೆದ ಶುಕ್ರವಾರ ತನ್ನನ್ನು ಭೇಟಿಯಾದ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್‌ರಿಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಸುದ್ದಿಗಾರರಿಗೆ ತಿಳಿಸಿದರು.

‘‘ದಕ್ಷಿಣ ಏಶ್ಯದ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದ್ದು, ಭಯೋತ್ಪಾದಕ ಗುಂಪುಗಳ ವಿರುದ್ಧ ಹೆಚ್ಚಿನ ದಮನ ಕಾರ್ಯಾಚರಣೆಯನ್ನು ನಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನ ವಹಿಸಿಕೊಳ್ಳಬೇಕು ಎಂಬುದಾಗಿ ಅಮೆರಿಕದ ಉಪಾಧ್ಯಕ್ಷರು ಪಾಕಿಸ್ತಾನದ ಪ್ರಧಾನಿಗೆ ಸೂಚಿಸಿದರು’’ ಎಂದು ನೋವರ್ಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News