ಸಿನೆಮಾ ಆಗಲಿದೆ ಶ್ರೀದೇವಿ ಜೀವನಗಾಥೆ

Update: 2018-03-24 10:57 GMT

ಸೌಂದರ್ಯ ಹಾಗೂ ಅದ್ಭುತ ನಟನೆಯಿಂದ ಇಡೀ ಭಾರತೀಯ ಚಿತ್ರರಂಗವನ್ನೇ ಮೋಡಿ ಮಾಡಿದ್ದ ಶ್ರೀದೇವಿ ಈಗ ಇತಿಹಾಸದ ಪುಟಕ್ಕೆ ಸೇರಿಹೋಗಿದ್ದಾರೆ.ಆದರೆ ಈ ಮಹಾನ್ ನಟಿಯ ಬದುಕು, ಬಾಲಿವುಡ್‌ನಲ್ಲಿ ದೃಶ್ಯಕಾವ್ಯವಾಗಿ ಮೂಡಿಬರಲಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಂಸಲಾಲ್ ಮೆಹ್ತಾ, ಶ್ರೀದೇವಿಯ ಜೀವನಗಾಥೆಯನ್ನು ಬೆಳ್ಳಿತೆರೆಗೆ ತರಲಿದ್ದಾರೆ.

ಬಾಲಿವುಡ್‌ನ ಪ್ರತಿಭಾವಂತ ನಟಿ ವಿದ್ಯಾಬಾಲನ್, ಈ ಚಿತ್ರದಲ್ಲಿ ಶ್ರೀದೇವಿಯ ಪಾತ್ರದಲ್ಲಿ ನಟಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ವಿಷಯವಾಗಿ ತಾನು ಈಗಾಗಲೇ ವಿದ್ಯಾಬಾಲನ್‌ರನ್ನು ಸಂಪರ್ಕಿಸಿರುವುದಾಗಿಯೂ ಹಂಸ್‌ಲಾಲ್ ಮೆಹ್ತಾ ಹೇಳಿಕೊಂಡಿದ್ದಾರೆ. ಶ್ರೀದೇವಿಯನ್ನು ನಾಯಕಿಯನ್ನಾಗಿ ಮಾಡಿ, ಒಂದಾದರೂ ಚಿತ್ರ ಮಾಡಬೇಕೆಂಬ ಹಂಬಲ ಹಂಸಲಾಲ್‌ಗಿತ್ತಂತೆ. ಆದಾಗ್ಯೂ ದುರದೃಷ್ಟವಶಾತ್ ಅವರ ಈ ಕನಸು ಈಡೇರಲಿಲ್ಲ. ಆದಾಗ್ಯೂ,ತನ್ನನ್ನು ಕಾಡುತ್ತಿರುವ ಈ ಕೊರತೆಯನ್ನು ನೀಗಿಸುವುದಕ್ಕಾಗಿ, ತಾನು ಶ್ರೀದೇವಿಯ ಬಯೋಪಿಕ್ ಚಿತ್ರಕ್ಕೆ ಮುಂದಾಗಿದ್ದಾಗಿ ಮೆಹ್ತಾ ಹೇಳುತ್ತಾರೆ.

ಶ್ರೀದೇವಿಗೆ ಸರಿಸಾಟಿಯಾದ ನಟಿ ಇನ್ನೊಬ್ಬರಿಲ್ಲ ಎಂದು ಹೇಳುವ ಹಂಸಲಾಲ್, ಈ ಚಿತ್ರವನ್ನು ಅಗಲಿದ ನಟಿಗೆ ಶ್ರದ್ಧಾಂಜಲಿಯಾಗಿ ಸಮರ್ಪಿಸಲಿ ದ್ದಾರಂತೆ. ಈ ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಯಾವ ನಟಿ, ನಟಿಯರು ಬೇಕೆಂಬುದು ಈಗಾಗಲೇ ಹಂಸಲಾಲ್ ಊಹಿಸಿದ್ದಾರೆ. ಅವರೆಲ್ಲರನ್ನೂ ಹಾಕಿಕೊಂಡೇ ಈ ಚಿತ್ರವನ್ನು ನಿರ್ಮಿಸಲು ಹಂಸಲಾಲ್ ದೃಢನಿರ್ಧಾರ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News