ಫೇಸ್ ಬುಕ್ ದತ್ತಾಂಶ ಸೋರಿಕೆ: ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸರಕಾರ ನೋಟಿಸ್

Update: 2018-03-24 14:43 GMT

ಹೊಸದಿಲ್ಲಿ, ಮಾ. 24: ಭಾರತೀಯ ಫೇಸ್‌ಬುಕ್ ಬಳಕೆದಾರರ ದತ್ತಾಂಶದ ದುರ್ಬಳಕೆ ಮಾಡಿ ಜನರ ಮತದಾನದ ಒಲವಿನ ಮೇಲೆ ಪ್ರಭಾವ ಬೀರಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿ ಫೇಸ್‌ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಹಗರಣದ ಕೇಂದ್ರ ಬಿಂದುವಾಗಿರುವ ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸರಕಾರ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

 ‘‘ಭಾರತದ ಫೇಸ್‌ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಮಾಡಿ ಚುನಾವಣೆ ಮೇಲೆ ಪ್ರಭಾವ ಬೀರಿದ ಆರೋಪ ಎದುರಿಸುತ್ತಿರುವ ಕೇಂಬ್ರಿಜ್ ಅನಾಲಿಟಿಕಾಕ್ಕೆ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿದೆ.’’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

  ಫೇಸ್‌ಬುಕ್ ಮಾಹಿತಿ ಸೋರಿಕೆ ಮಾಡಿ ಚುನಾವಣೆ ಮೇಲೆ ಪ್ರಭಾವ ಬೀರಲಾಗಿದೆಯೇ ಎಂಬ ಬಗ್ಗೆ ಸಚಿವಾಲಯ ಕಂಪೆನಿಯಿಂದ ಮಾಹಿತಿ ಕೋರಿದೆ. ಮಾರ್ಚ್ 31ರ ಒಳಗಡೆ ಪ್ರತಿಕ್ರಿಯೆ ದಾಖಲಿಸುವಂತೆ ಸರಕಾರ ಕಂಪೆನಿಗೆ ತಿಳಿಸಿದೆ.

 ಈ ಕಾರ್ಯ ನಿರ್ವಹಿಸಲು ಇತರ ಘಟಕಗಳು ಇವೆಯೇ ಎಂದು ಸರಕಾರ ಕಂಪೆನಿಯನ್ನು ಪ್ರಶ್ನಿಸಿದೆ. ದತ್ತಾಂಶ ಹೊಂದಲು ಬಳಸುತ್ತಿದ್ದ ವಿದಾನದ ಬಗ್ಗೆ ವಿವರಿಸುವಂತೆ ಹಾಗೂ ಬಳಕೆದಾರರಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ತಿಳಿಸುವಂತೆ ಸರಕಾರ ಕಂಪೆನಿಗೆ ನಿರ್ದೇಶಿಸಿದೆ.

 ‘‘ಇಂತಹ ಬೆಳವಣಿಗೆ ಬಗ್ಗೆ ಸರಕಾರ ಕಳವಳಗೊಂಡಿದೆ. ಮೂಲಭೂತ ಹಕ್ಕಾದ ಖಾಸಗಿತನದ ರಕ್ಷಣೆ, ಸುರಕ್ಷೆ, ಭಾರತದ ಪ್ರತಿಯೊಬ್ಬ ಭಾರತೀಯನ ದತ್ತಾಂಶದ ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ.’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News