50 ವರ್ಷಗಳ ಬಳಿಕ ಮತ್ತೆ ಕಾಡು ಪ್ರವೇಶಿಸಿದ ಚುಕ್ಕಿ ಮರ್ಸುಪಿಯಾಲ್

Update: 2018-03-27 18:33 GMT

ನರಿಗಳಿಂದ ನಾಶವಾಗಿದ್ದ ಚುಕ್ಕಿ ಮರ್ಸುಪಿಯಾಲ್ (ಹೊಟ್ಟೆ ಚೀಲದ ಪ್ರಾಣಿ) ಆಸ್ಟ್ರೇಲಿಯಾದ ಮೈನ್‌ಲ್ಯಾಂಡ್ ಕಾಡಿಗೆ ಮತ್ತೆ ಬಂದಿದೆ. ಅತಿ ಅಪರೂಪದ ಈ ಪ್ರಾಣಿ ಪ್ರಭೇದ 50 ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ಈ ಪ್ರಾಣಿ ಪ್ರಭೇದದ ಸಂರಕ್ಷಣೆ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ತುಪ್ಪಳಗಳುಳ್ಳ ಮಾಂಸಾಹಾರಿಯಾದ ಮನೆ ಬೆಕ್ಕಿನ ಗಾತ್ರದಲ್ಲಿರುವ ಈ ಪ್ರಾಣಿ ಮೈನ್‌ಲ್ಯಾಂಡ್‌ನಿಂದ 1960ರಲ್ಲಿ ನಾಪತ್ತೆಯಾಗಿತ್ತು. ಆದರೆ, ದ್ವೀಪರಾಷ್ಟ್ರವಾದ ತಸ್ಮಾನಿಯಾದಲ್ಲಿ ಇವುಗಳ ಸಂತತಿ ಮುಂದುವರಿದಿತ್ತು.
15 ವರ್ಷಗಳ ಸಂರಕ್ಷಣಾ ಯೋಜನೆ ಬಳಿಕ ಇಂತಹ 22 ಪ್ರಾಣಿಗಳನ್ನು ಕಳೆದ ವಾರ ಸಿಡ್ನಿಯ ದಕ್ಷಿಣದ ಬೂಡೆರೀ ನ್ಯಾಶನಲ್ ಪಾರ್ಕ್‌ನಲ್ಲಿ ಬಿಡಲಾಗಿದೆ. ಅಳಿವಿನಂಚಿನಲ್ಲಿರುವ ಈ ಮಾಂಸಾಹಾರಿ ಪ್ರಾಣಿಯನ್ನು ಮರು ಪರಿಚಯಿಸುತ್ತಿರುವುದು ಆಸ್ಟ್ರೇಲಿಯಾದಲ್ಲೇ ಪ್ರಥಮ ಎಂದು ಡಬ್ಲುಡಬ್ಲುಡಬ್ಲು ಆಸ್ಟ್ರೇಲಿಯಾದ ಡಾರ್ರೆನ್ ಗ್ರೋವರ್ ಇತ್ತೀಚೆಗೆ ತಿಳಿಸಿದ್ದಾರೆ. ಈ ಪ್ರಾಣಿಗಳಿಗೆ ಜಿಪಿಎಸ್ ಕಾಲರ್ ಅಳವಡಿಸಲಾಗಿದೆ. ಆದುದರಿಂದ ಇವುಗಳ ಅಭಿವೃದ್ಧಿಯ ಬಗ್ಗೆ ನಿರಂತರ ನಿಗಾ ಇರಿಸಲು ಸಾಧ್ಯ. ಹೊರಗಿನಿಂದ ಹಾಗೂ ಪಾರ್ಕ್ ನ ಒಳಗಡೆ ನರಿಗಳು ಪ್ರವೇಶಿಸುವುದರ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಗ್ರೋವರ್ ತಿಳಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News