15 ನಿಮಿಷಗಳ ಡಾನ್ಸ್‌ಗೆ 5 ಕೋಟಿ ಕೇಳಿದ ರಣವೀರ್

Update: 2018-03-30 12:04 GMT

ಕೇವಲ 15 ನಿಮಿಷಗಳ ಡ್ಯಾನ್ಸ್‌ಗಾಗಿ, ಬಾಲಿವುಡ್ ಸೂಪರ್‌ಸ್ಟಾರ್ ರಣವೀರ್‌ಸಿಂಗ್ 5 ಕೋಟಿ ರೂ. ಸಂಭಾವನೆ ಕೇಳಿದ್ದಾರೆಯೇ?. ಹಾಗಂತ ಬಲವಾದ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಎಪ್ರಿಲ್‌ನಲ್ಲಿ ಆರಂಭಗೊಳ್ಳಲಿರುವ ಐಪಿಎಲ್‌ನ 11ನೇ ಸೀಸನ್‌ನ ಉದ್ಘಾಟನಾ ಸಮಾರಂಭದಲ್ಲಿ ಕೇವಲ 15 ನಿಮಿಷಗಳ ನೃತ್ಯಪ್ರದರ್ಶನ ನೀಡುವಂತೆ ರಣವೀರ್ ಅವರನ್ನು ಸಂಘಟಕರು ಸಂಪರ್ಕಿಸಿದ್ದರು. ಆದರೆ ರಣವೀರ್‌ಸಿಂಗ್ 5 ಕೋಟಿ ರೂ. ಸಂಭಾವನೆಯ ಬೇಡಿಕೆಯನ್ನಿಟ್ಟಾಗ ಅವರು ಹೌಹಾರಿದ್ದಾರಂತೆ. ಆದಾಗ್ಯೂ, ಸಂಘಟಕರು ಅದನ್ನು ಒಪ್ಪಿಕೊಂಡರೆ, ಇಲ್ಲವೇ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್‌ನ ಅದ್ಭುತ ಯಶಸ್ಸಿನ ಬಳಿಕ ರಣವೀರ್ ಸಿಂಗ್‌ರ ತಾರಾವೌಲ್ಯ ಆಕಾಶಕ್ಕೇರಿದೆ. ತನ್ನ ಹೊಸ ಚಿತ್ರಗಳಿಗೆ ರಣವೀರ್ ಈಗ ದುಬಾರಿ ಸಂಭಾವನೆಯನ್ನೇ ಕೇಳುತ್ತಿದ್ದಾರಂತೆ. ಹೀಗಾಗಿಯೇ ರಣವೀರ್ ತನ್ನ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಪ್ರದರ್ಶನಕ್ಕೆ 5 ಕೋಟಿ ರೂ. ಕೇಳಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News