ರಾಜಮೌಳಿ ಚಿತ್ರಕ್ಕೆ ಜ್ಯೂ.ಎನ್‌ಟಿಆರ್, ರಾಮ್‌ಚರಣ್

Update: 2018-03-30 12:18 GMT

ಬಾಹುಬಲಿ2 ನಂತರ ನಿರ್ದೇಶಕ ರಾಜಮೌಳಿ ಅವರ ಮುಂದಿನ ಚಿತ್ರ ಯಾವುದೆಂದು ಸಿನೆಮಾಪ್ರಿಯರು ಕಾತರದಿಂದ ನಿರೀಕ್ಷಿಸುತ್ತಲೇ ಇದ್ದರು. ಕೊನೆಗೂ ರಾಜಮೌಳಿ ತನ್ನ ಹೊಸ ಪ್ರಾಜೆಕ್ಟ್‌ನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೊತೆಗೆ ಚಿತ್ರದ ನಾಯಕರಾಗಿ ರಾಮ್‌ಚರಣ್ ತೇಜಾ ಹಾಗೂ ಜೂನಿಯರ್ ಎನ್‌ಟಿಆರ್ ನಟಿಸಲಿರುವುದನ್ನು ಖಚಿತಪಡಿಸಿದ್ದಾರೆ.

 ಈ ಚಿತ್ರಕ್ಕೆ ಆರ್‌ಆರ್‌ಆರ್ ಎಂದು ಹೆಸರಿಡಲಾಗಿದೆ ಯೆಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಾದರೂ, ಅದನ್ನು ರಾಜಮೌಳಿ ಈ ತನಕ ದೃಢಪಡಿಸಿಲ್ಲ.

  ಇಷ್ಟಕ್ಕೂ ರಾಮ್‌ಚರಣ್ ಹಾಗೂ ಜೂ.ಎನ್‌ಟಿಆರ್, ರಾಜಮೌಳಿ ನಿರ್ದೇಶನದ ಚಿತ್ರಗಳಲ್ಲಿ ನಟಿಸಿರುವುದು ಇದು ಮೊದಲೇನಲ್ಲ. ರಾಜಮೌಳಿ ನಿರ್ದೇಶನದ ಮಗಧೀರದಲ್ಲಿ ರಾಮ್‌ಚರಣ್ ತೇಜಾ ಹಾಗೂ ಸ್ಟೂಡೆಂಟ್ ನಂ.1ರಲ್ಲಿ ಜ್ಯೂ.ಎನ್.ಟಿ.ಆರ್ ನಾಯಕ ಪಾತ್ರದಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ರಾಜವೌಳಿ, ಜ್ಯೂ.ಎನ್.ಟಿ.ಆರ್ ಹಾಗೂ ರಾಮ್‌ಚರಣ್ ಅವರ ಭರ್ಜರಿ ಕಾಂಬಿನೇಶನ್‌ನ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News