ಸೈಲೆಂಟಾಗಿಯೇ ಬರುತ್ತಿದೆ ಮರ್ಕ್ಯುರಿ

Update: 2018-03-30 12:22 GMT

1987ರಲ್ಲಿ ತೆರೆಕಂಡ ಪುಷ್ಪಕವಿಮಾನ ಮೂಕಿಚಿತ್ರಗಳ ಸಾಲಿನಲ್ಲಿ ಒಂದು ಮಾಸ್ಟರ್‌ಪೀಸ್ ಎನಿಸಿದೆ. ಅಂದಿನ ಪುಷ್ಪಕ ವಿಮಾನ ಚಿತ್ರದ ನೆನಪು ಇಂದಿಗೂ ಚಿತ್ರರಸಿಕರ ಮನದಲ್ಲಿ ಹಸಿರಾಗಿಯೇ ಉಳಿದಿದೆ. ಕಮಲ್ ಹಾಸನ್ ನಾಯಕನಾಗಿ ಅಭಿನಯಿಸಿದ್ದ ಪುಷ್ಪಕ ವಿಮಾನ, ಭರ್ಜರಿ ಯಶಸ್ಸಿನ ಜೊತೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವುದೂ ಈಗ ಇತಿಹಾಸ.

 ಪುಷ್ಪಕ ವಿಮಾನದ ಚಿತ್ರದ ಸ್ಫೂರ್ತಿಯಿಂದಲೋ ಎಂಬಂತೆ ತಮಿಳಿನ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮರ್ಕ್ಯುರಿ ಎಂಬ ಮೂಕಿ ಚಿತ್ರ ತಯಾರಿಸಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ಸೈಲೆಂಟಾಗಿಯೇ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಮರ್ಕ್ಯುರಿ, ಎಪ್ರಿಲ್ 13ರಂದು ತೆರೆಕಾಣಲು ಸಿದ್ಧವಾಗಿದೆ. ಪ್ರಭುದೇವ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಬಿಡುಗಡೆಗೆ ಮುನ್ನವೇ ಚಿತ್ರದ ಬಗ್ಗೆ ವ್ಯಾಪಕ ಕುತೂಹಲ ಗರಿಗೆದರಿದೆ. ಸನತ್ ರೆಡ್ಡಿ, ದೀಪಕ್ ಪರಮೇಶ್, ಅನೀಶ್ ಪ್ಯಾಡ್‌ಮ್ಯಾನ್, ರಮ್ಯಾ ನಂಬೀಶನ್ ಹಾಗೂ ಇಂದೂಜಾ ಈ ಚಿತ್ರದ ಉಳಿದ ಪಾತ್ರಗಳಲ್ಲಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ ನೀಡಿದ್ದು, ತಿರು ಕ್ಯಾಮರಾ ಹಿಡಿದಿದ್ದಾರೆ. ಮರ್ಕ್ಯುರಿ ಖಂಡಿತವಾಗಿಯೂ ಪ್ರೇಕ್ಷಕರ ಕಣ್ಣಿಗೆ ಹಾಗೂ ಕಿವಿಗಳಿಗೆ ಅದ್ಭುತವಾದ ಅನುಭವವನ್ನು ನೀಡಲಿದೆಯೆಂದು ನಿರ್ದೇಶಕ ಕಾರ್ತಿಕ್ ಹೇಳಿಕೊಂಡಿದ್ದಾರೆ. ಐವರು ಸ್ನೇಹಿತರ ಬಳಗವೊಂದು ಅಪರಿಚಿತ ಜಾಗವೊಂದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಅಲ್ಲಿ ಅವರು ಖತರ್‌ನಾಕ್‌ನಿಂದ ಎದುರಾಗುವ ಅಪತ್ತುಗಳು ಹಾಗೂ ಅದರಿಂದ ಅವರು ಪಾರಾಗುವುದೇ ಚಿತ್ರದ ಕಥೆಯಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸುತ್ತಿರುವುದು ಪ್ರಭುದೇವ್. ಹೀಗಾಗಿ ಚಿತ್ರದ ಬಗ್ಗೆ ಸಿನೆಮಾಪ್ರಿಯರ ಕುತೂಹಲ ಇಮ್ಮಡಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News