ಸಿಬಿಎಸ್ ಇ ಮರುಪರೀಕ್ಷೆ ಬೇಡ: ಕೇಂದ್ರಕ್ಕೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹ
Update: 2018-03-30 22:43 IST
ಹೊಸದಿಲ್ಲಿ, ಮಾ.30: ಸಿಬಿಎಸ್ ಇ 10 ಹಾಗು 12ನೆ ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮರು ಪರೀಕ್ಷೆ ನಡೆಸದಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪ್ರಯೋಜನ ಪಡೆದ ಕೆಲವು ವಿದ್ಯಾರ್ಥಿಗಳನ್ನು ಗುರುತಿಸುವುದು ಹಾಗು ಅವರ ಪೇಪರ್ ಗಳನ್ನು ರದ್ದುಗೊಳಿಸುವುದೇ ಸರಿಯಾದ ಕ್ರಮ ಎಂದವರು ಹೇಳಿದ್ದಾರೆ.
12ನೆ ತರಗತಿಯ ಅರ್ಥಶಾಸ್ತ್ರ ಹಾಗು 10ನೆ ತರಗತಿಯ ಗಣಿತ ಪ್ರಶ್ನೆಪತ್ರಿಕೆಯ ಪ್ರತಿಗಳು ಕ್ರಮವಾಗಿ ಸೋಮವಾರ ಹಾಗು ಬುಧವಾರ ಲೀಕ್ ಆಗಿತ್ತು. ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಮರುಪರೀಕ್ಷೆ ನಡೆಸಲಾಗುವುದು ಎಂದು ಸಿಬಿಎಸ್ ಇ ಹೇಳಿತ್ತು.
“ಪೇಪರ್ ಸೋರಿಕೆಯಿಂದ ಪ್ರಯೋಜನ ಪಡೆದವರನ್ನು ಗುರುತಿಸಿ ಅವರ ಪೇಪರ್ ಗಳನ್ನು ರದ್ದು ಮಾಡಬೇಕು” ಎಂದವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ರನ್ನು ಉಲ್ಲೇಖಿಸಿ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.