×
Ad

ಪ.ಬಂಗಾಲ ಹಿಂಸಾಚಾರ ಪ್ರಕರಣ : ಶಾಗೆ ವರದಿ ಒಪ್ಪಿಸಲಿರುವ ಬಿಜೆಪಿ ಸಮಿತಿ

Update: 2018-03-30 23:02 IST

ಹೊಸದಿಲ್ಲಿ, ಮಾ.30: ಪಶ್ಚಿಮ ಬಂಗಾಲದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭ ನಡೆದ ಹಿಂಸಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಲ್ವರು ಸದಸ್ಯರ ತಂಡವನ್ನು ರಚಿಸಿದ್ದು , ತಂಡವು ಪ.ಬಂಗಾಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ವರದಿಯನ್ನು ಶಾಗೆ ಒಪ್ಪಿಸಲಿದೆ.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಓಂ ಮಾಥುರ್, ವಕ್ತಾರ ಶಾನವಾಝ್ ಹುಸೈನ್, ಸಂಸದರಾದ ರೂಪಾ ಗಂಗೂಲಿ ಮತ್ತು ವಿ.ಡಿ.ರಾಮ್ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿಯು ಪ.ಬಂಗಾಳಕ್ಕೆ ಭೇಟಿ ನೀಡಿ ಪಕ್ಷಾಧ್ಯಕ್ಷರಿಗೆ ವರದಿ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

     ಇದಕ್ಕೂ ಮುನ್ನ ಹಿಂಸಾಚಾರ ಘಟನೆಯ ಬಗ್ಗೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಟೀಕಿಸಿದ ಬಿಜೆಪಿ, ರಾಜ್ಯವು ಹೊತ್ತಿ ಉರಿಯುತ್ತಿದ್ದರೂ ಟಿಎಂಸಿ ಅಧ್ಯಕ್ಷೆ ಮಮತಾ ಅಗ್ಗದ ರಾಜಕೀಯ ನಡೆಸುತ್ತಿದ್ದರು ಎಂದು ದೂರಿದೆ. ರಾಣಿಗಂಜ್ ಬಳಿ ಸೋಮವಾರ ರಾಮನವಮಿ ವೆುರವಣಿಗೆಯ ವಿಷಯದಲ್ಲಿ ಎರಡು ತಂಡಗಳ ಮಧ್ಯೆ ಉಂಟಾದ ವಿವಾದದಿಂದ ಹಿಂಸಾಚಾರ ಭುಗಿಲೆದ್ದಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಅಲ್ಲದೆ ಬಾಂಬ್ ಸ್ಫೋಟದಿಂದ ಪೊಲೀಸ್ ಉಪಾಯುಕ್ತರು ತಮ್ಮ ಒಂದು ಕೈಯನ್ನು ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News