39 ಭಾರತೀಯರ ಮೃತದೇಹಗಳನ್ನು ತರಲು ಇರಾಕ್‌ಗೆ ತೆರಳಿದ ಸಚಿವ ವಿ.ಕೆ.ಸಿಂಗ್

Update: 2018-04-01 15:46 GMT

 ಹೊಸದಿಲ್ಲಿ,ಎ.1: ಯುದ್ಧಗ್ರಸ್ತ ಇರಾಕ್‌ನಲ್ಲಿ ಕೊಲ್ಲಲ್ಪಟ್ಟಿರುವ 39 ಭಾರತೀಯರ ಶವಗಳನ್ನು ಸ್ವದೇಶಕ್ಕೆ ವಾಪಸ್ ತರಲು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು ರವಿವಾರ ಮಧ್ಯಾಹ್ನ ಇಲ್ಲಿಯ ಹಿಂಡೋನ್ ವಾಯುನೆಲೆಯಿಂದ ಆ ರಾಷ್ಟ್ರಕ್ಕೆ ಪ್ರಯಾಣಿಸಿದರು. ಅವರು ಸೋಮವಾರ ಶವಗಳೊಂದಿಗೆ ವಾಪಸ್ ಆಗುವ ನಿರೀಕ್ಷೆಯಿದೆ.

ಭಾರತಕ್ಕೆ ಮರಳಿದ ಬಳಿಕ ಸಿಂಗ್ ಶವಗಳನ್ನು ಸಂಬಂಧಿತ ಕುಟುಂಬಗಳಿಗೆ ಹಸ್ತಾಂತರಿಸಲು ಮೊದಲು ಅಮೃತಸರಕ್ಕೆ ಮತ್ತು ನಂತರ ಪಾಟ್ನಾ ಹಾಗೂ ಕೋಲ್ಕತಾಗೆ ತೆರಳಲಿದ್ದಾರೆ.

 2014, ಜೂನ್‌ನಲ್ಲಿ ಇರಾಕ್‌ನ ಮೊಸುಲ್‌ನಲ್ಲಿ ಐಸಿಸ್ ಭಯೋತ್ಪಾದಕರು 40 ಭಾರತೀಯರನ್ನು ಅಪಹರಿಸಿದ್ದರು. ಅವರ ಪೈಕಿ ಓರ್ವ ತಾನು ಬಾಂಗ್ಲಾದೇಶದ ಮುಸ್ಲಿಂ ಎಂದು ಹೇಳಿಕೊಂಡು ತಪ್ಪಿಸಿಕೊಂಡಿದ್ದು, ಉಳಿದ 39 ಜನರನ್ನು ಬಾದೂಷ್‌ಗೆ ಒಯ್ದು ಅಲ್ಲಿ ಕೊಲ್ಲಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕಳೆದ ತಿಂಗಳು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News