ಎ.4: ಸಿಬಿಎಸ್‌ಇ ಮರುಪರೀಕ್ಷೆ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆ

Update: 2018-04-02 14:02 GMT

ಹೊಸದಿಲ್ಲಿ, ಎ.2: ಹತ್ತನೇ ತರಗತಿಯ ಗಣಿತ ಪರೀಕ್ಷೆಯನ್ನು ಮರುನಡೆಸುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಯ ನಿರ್ಧಾರವನ್ನು ಪ್ರಶ್ನಿಸಿ ಹಾಕಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರದಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಪ್ರಕರಣವನ್ನು ತ್ವರಿತವಾಗಿ ಆಲಿಸಬೇಕೆಂಬ ಮನವಿಗೆ ಸ್ಪಂದಿಸಿ ಅರ್ಜಿಗಳನ್ನು ಶೀಘ್ರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠವು ತಿಳಿಸಿದೆ. ಮರುಪರೀಕ್ಷೆ ನಿರ್ಧಾರವನ್ನು ಪ್ರಶ್ನಿಸಿರುವುದರ ಜೊತೆಗೆ ಅರ್ಜಿದಾರರು ಪತ್ರಿಕೆ ಸೋರಿಕೆಯ ತನಿಖೆ ನಡೆಸಲು ಮತ್ತು ಈಗಾಗಲೇ ನಡೆದಿರುವ ಪರೀಕ್ಷೆಯ ಆಧಾರದಲ್ಲಿ ಫಲಿತಾಂಶವನ್ನು ಘೋಷಿಸುವಂತೆಯೂ ಮನವಿ ಮಾಡಿದ್ದಾರೆ. ಹನ್ನೆರಡನೆ ತರಗತಿ ಅರ್ಥಶಾಸ್ತ್ರ ಮರುಪರೀಕ್ಷೆಯು ದೇಶಾದ್ಯಂತ ಎ.25ರಂದು ನಡೆಯಲಿದ್ದರೆ ಹತ್ತನೇ ತರಗತಿ ಗಣಿತ ಪರೀಕ್ಷೆಯು ದಿಲ್ಲಿ, ಎನ್ಸಿಆರ್ ಮತ್ತು ಹರ್ಯಾಣದಲ್ಲಿ ಜುಲೈಯಲ್ಲಿ ನಡೆಯಲಿದೆ ಎಂದು ಸರಕಾರ ಮಾರ್ಚ್ 30ರಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News