×
Ad

ಕೇರಳ ಮುಷ್ಕರ: ಜನಜೀವನ ಅಸ್ತವ್ಯಸ್ತ

Update: 2018-04-02 21:17 IST

ಕೊಚ್ಚಿ,ಎ.2: ವಿವಿಧ ವಲಯಗಳಲ್ಲಿ ನೌಕರರ ಸೇವಾವಧಿಯನ್ನು ನಿಗದಿಪಡಿಸುವ ಕೇಂದ್ರ ಸರಕಾರದ ಆದೇಶವನ್ನು ಪ್ರತಿಭಟಿಸಿ ಕೇರಳದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸೋಮವಾರ ಹರತಾಳಕ್ಕೆ ಕರೆ ನೀಡಿದ್ದು, ರಾಜ್ಯಾದ್ಯಂತ ಜನಜೀವ ಅಸ್ತವ್ಯಸ್ತಗೊಂಡಿತು

 ಮುಷ್ಕರದ ಹಿನ್ನೆಲೆಯಲ್ಲಿ ಕೇರಳಾದ್ಯಂತ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೇರಳ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆದರೆ ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯುಂಟಾಗಿರಲಿಲ್ಲ. ಕೇರಳದ ವಿವಿಧ ನಗರಗಳಲ್ಲಿ ಪ್ರಮುಖ ಸಂಸ್ಥೆಗಳು, ರೆಸ್ಟಾರೆಂಟ್‌ಗಳು, ಸರಕಾರಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಮುಚ್ಚಿದ್ದವು. ಆದಾಗ್ಯೂ ಸಣ್ಣಪುಟ್ಟ ಅಂಗಡಿಗಳು ತೆರೆದಿರುವುದು ಕಂಡುಬರುತ್ತಿತ್ತು.

ನಿಗದಿಯಾದಂತೆ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳು ನಡೆದವಾದರೂ, ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಲು, ದಿನಪತ್ರಿಕೆಗಳು ಹಾಗೂ ಆಸ್ಪತ್ರೆಗಳನ್ನು ಮುಷ್ಕರದಿಂದ ಹೊರಗಿಡಲಾಗಿತ್ತು. ಮುಷ್ಕರದಿಂದಾಗಿ ಬಸ್‌ನಿಲ್ದಾಣಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರಿಗೆ ಪೊಲೀಸರು ನೆರವಾಗುತ್ತಿದ್ದುದು ಕಂಡುಬರುತ್ತಿತ್ತು.

  ಕೇರಳದ ವಾಣಿಜ್ಯ ರಾಜಧಾನಿ ಕೊಚ್ಚಿಯಲ್ಲಿ, ಮೆಟ್ರೋ ರೈಲುಗಳು ಮುಂಜಾನೆಯಿಂದಲೇ ಕಾರ್ಯನಿರ್ವಹಿಸಿ, ಪ್ರಯಾಣಿಕರಿಗೆ ನೆರವಾದವು. ದೊಡ್ಡ ಸಂಖ್ಯೆಯಲ್ಲಿ ಜನರು ಖಾಸಗಿ ವಾಹನಗಳನ್ನು ಸಂಚಾರಕ್ಕೆ ಬಳಸಿದ್ದರು. ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಿದ್ದರೂ, ಉಬೇರ್ ಮತ್ತಿತರ ಆನ್‌ಲೈನ್ ಕ್ಯಾಬ್‌ಸೇವೆಗಳು ಓಡಾಟ ಅಧಿಕವಾಗಿದ್ದವು. ನಗರದ ಚಲನಚಿತ್ರ ಮಂದಿರಗಳೂ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಸಿನೆಮಾ ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News