9 ದಿನಗಳಲ್ಲಿ ಕೋಟಿ ರೂ. ಗಳಿಸಿದ ‘ಅಪ್ಪೆ ಟೀಚರ್’

Update: 2018-04-03 14:25 GMT

ಮಂಗಳೂರು, ಎ. 3: ಕಿಶೋರ್ ಮೂಡುಬಿದ್ರೆ ಅವರ ನಿರ್ದೇಶನದಲ್ಲಿ ಕಳೆದ ವಾರ ತೆರೆಕಂಡ ಚಲನಚಿತ್ರ ‘ಅಪ್ಪೆ ಟೀಚರ್’ ತುಳು ಚಲನಚಿತ್ರ ರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ, ತೆರೆಕಂಡ ಒಂಬತ್ತು ದಿನಗಳಲ್ಲಿ 1ಕೋಟಿ ರೂ. ದಾಖಲೆಯ ಗಳಿಕೆಯನ್ನು ಪಡೆದು, ಪ್ರೇಕ್ಷಕರಿಂದ ಅಪಾರ ಪ್ರಶಂಸೆಯನ್ನು ಪಡೆದಿದೆ.

ಮಂಗಳೂರಿನ ಜ್ಯೋತಿ ಚಲನಚಿತ್ರ ಮಂದಿರದಲ್ಲಿ ಈ ವಾರವಷ್ಟೆ ತೆರೆಕಂಡಿದೆ, ಮಕ್ಕಳ ಪರೀಕ್ಷೆಯೂ ಮುಗಿದ ಕಾರಣ ವಾರಂತ್ಯದಲ್ಲಿ ತೆರೆಕಂಡ ಉಡುಪಿ, ಸುರತ್ಕಲ್, ಬೆಳ್ತಂಗಡಿ, ಪುತ್ತೂರು, ಕಾರ್ಕಳ ಹಾಗೂ ಮೂಡಬಿದಿರೆ ಚಿತ್ರಮಂದಿರಗಳಲ್ಲೂ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ವೀಕ್ಷಿಸುತ್ತಿದ್ದಾರೆ. ರವಿವಾರದಂದು ಎಲ್ಲಾ ದೇಖಾವೆಗಳು ಹೌಸ್‌ಫುಲ್ ಆಗುತ್ತಿವೆ.

ವಿಶೇಷವಾಗಿ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ವಾರದ ದಿನಗಳಲ್ಲಿ ಬಹುತೇಕ ಎಲ್ಲಾ ದೇಖಾವೆಗಳು ಹೌಸ್‌ಫುಲ್ ಆಗುತ್ತಿವೆ. ಒಟ್ಟಾಗಿ ಈ ಚಲನಚಿತ್ರವು ಜ್ಯೋತಿ ಚಲನಚಿತ್ರ ಮಂದಿರದ ಇತಿಹಾಸದಲ್ಲಿ ಒಂದು ಮೈಲಿಗಲಾಗುತ್ತಿದೆ ಎಂಬುದರಲ್ಲಿ ಅಶ್ಚರ್ಯವಿಲ್ಲ. ‘ಅಪ್ಪೆಟೀಚರ್’ ಚಲನಚಿತ್ರವು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡುತ್ತಿದೆ. ಇನ್ನು ಮುಂದೆಯೂ ‘ಸ್ವಯಂ ಪ್ರಭ’ ಬ್ಯಾನರ್‌ನಿಂದ ಇಂತಹ ಅನೇಕ ಉತ್ತಮ ಚಲನಚಿತ್ರಗಳು ಮೂಡಿಬರಲಿ ಎಂಬುದು ಪ್ರೇಕ್ಷಕರ ಆಶಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News