ಸಿದ್ದರಾಮಯ್ಯ ಸರಕಾರಕ್ಕೆ ಮತದಾರರು 10ರಲ್ಲಿ ನೀಡಿದ ಅಂಕವೆಷ್ಟು?

Update: 2018-04-03 13:59 GMT

ಹೊಸದಿಲ್ಲಿ, ಎ.3: ಶಿಕ್ಷಣ, ವಿದ್ಯುತ್ ಹಾಗು ನೀರಾವರಿ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸರಕಾರದ ಆಡಳಿತ ಹೇಗಿತ್ತು ಎನ್ನುವ ಬಗ್ಗೆ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಸಮೀಕ್ಷೆಯಲ್ಲಿ ಮತದಾರರು ರಾಜ್ಯ ಸರಕಾರಕ್ಕೆ 10ರಲ್ಲಿ 7 ಅಂಕಗಳನ್ನು ನೀಡಿದ್ದಾರೆ.

ಆದರೆ ಉದ್ಯೋಗಾವಕಾಶ ಹಾಗು ಭ್ರಷ್ಟಾಚಾರಕ್ಕೆ ಕಡಿವಾಣದ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರದ ಸಾಧಾರಣವಾಗಿದೆ ಎನ್ನಲಾಗಿದ್ದು, ಒಟ್ಟು ಆಡಳಿತದಲ್ಲಿ ಮತದಾರರು 10ರಲ್ಲಿ 7 ಅಂಕಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದ 225 ವಿಧಾನಸಭಾ ಕ್ಷೇತ್ರಗಳಲ್ಲಿ 13,224 ಸಂದರ್ಶಕರೊಂದಿಗೆ ಮಾತನಾಡಿ ಎಡಿಆರ್ ಈ ಸರ್ವೇ ನಡೆಸಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಜನರು ಅತೀ ಹೆಚ್ಚು ಪ್ರಾಮುಖ್ಯತೆ ನೀಡುವ ವಿಷಯಗಳಾವುವು ಎಂಬುವುದನ್ನು ಅರಿಯಲು 2017ರ ಡಿಸೆಂಬರ್ ನಿಂದ 2018ರ ಫೆಬ್ರವರಿಯೊಳಗೆ ಈ ಸಮೀಕ್ಷೆ ನಡೆಸಲಾಗಿದೆ.

ಶಾಲೆಗಳ ವಿಷಯದಲ್ಲಿ ಸರಕಾರವು ಉತ್ತಮ ಕೆಲಸಗಳನ್ನು ಮಾಡಿದೆ, (7.58), ವಿದ್ಯುತ್ (7.56) ಹಾಗು ಆಹಾರ ವಿತರಣಾ ಸಬ್ಸಿಡಿ (7.35)ಗಳಲ್ಲೂ ಸರಕಾರದ ಸಾಧನೆ ಉತ್ತಮವಾಗಿದೆ. ಉದ್ಯೋಗಾವಕಾಶ (6.70), ಭ್ರಷ್ಟಾಚಾರ ನಿಗ್ರಹ (6.67) ಹಾಗು ಉದ್ಯೋಗ ತರಬೇತಿ (6.60)ಯಲ್ಲಿ ಸರಕಾರದ ಸಾಧನೆ ಸಾಧಾರಣವಾಗಿದೆ ಎಂದು ಮತದಾರರು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಸರಕಾರದ ಒಟ್ಟು ಆಡಳಿತಕ್ಕೆ 10ರಲ್ಲಿ 7.05 ಅಂಕಗಳನ್ನು ನೀಡಿದ್ದಾರೆ.

ಶಾಲೆ (7.85), ವಿದ್ಯುತ್ (7.83) ಹಾಗು ಸಾರ್ವಜನಿಕ ಸಾರಿಗೆ (7.61) ಕ್ಷೇತ್ರಗಳಲ್ಲಿ ಸರಕಾರದ ಸಾಧನೆ ಉತ್ತಮ ಎಂದು ನಗರದ ಜನರು ಹೇಳಿದ್ದರೆ, ಸಾರ್ವಜನಿಕ ಶೌಚಾಲಯಗಳು ಹಾಗು ಫುಟ್ ಪಾತ್ ನಿರ್ಮಾಣ ಭ್ರಷ್ಠಚಾರ ನಿಗ್ರಹ ಹಾಗು ಉದ್ಯೋಗ ತರಬೇತಿಯಲ್ಲಿ ಸರಕಾರದ ಸಾಧನೆ ಸಾಧಾರಣ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News