5 ವರ್ಷಗಳಲ್ಲೇ ಅತ್ಯಧಿಕ ಮಟ್ಟ ತಲುಪಿದ ಪೆಟ್ರೋಲ್ ದರ!

Update: 2018-04-03 15:13 GMT

ಹೊಸದಿಲ್ಲಿ,ಎ.3: ಪೆಟ್ರೋಲ್ ಬೆಲೆಗಳ ನಾಗಾಲೋಟ ಮುಂದುವರಿದಿದ್ದು, ಮಂಗಳವಾರ ದಿಲ್ಲಿಯಲ್ಲಿ ಅದು ಪ್ರತಿ ಲೀಟರ್‌ಗೆ ರೂ.73.95ಕ್ಕೇರಿದೆ. ಇದು ಸುಮಾರು ಐದು ವರ್ಷಗಳಲ್ಲಿ ಗರಿಷ್ಠ ಬೆಲೆಯಾಗಿದೆ.

 2013,ಸೆಪ್ಟೆಂಬರ್‌ನಲ್ಲಿಯ ಪ್ರತಿ ಲೀ.ಗೆ ರೂ.74.10 ದಿಲ್ಲಿಯಲ್ಲಿ ಈ ಹಿಂದೆ ದಾಖಲಾಗಿದ್ದ ಅತ್ಯಧಿಕ ಬೆಲೆಯಾಗಿತ್ತು.

 ಮುಂಬೈ, ಕೋಲ್ಕತಾ ಮತ್ತು ಚೆನ್ನೈಗಳಲ್ಲಿಯೂ ಪೆಟ್ರೋಲ್ ಬೆಲೆಗಳು ಮಂಗಳವಾರ ಹೊಸ ಎತ್ತರವನ್ನು ತಲುಪಿದ್ದು, ಅನುಕ್ರಮವಾಗಿ ಪ್ರತಿ ಲೀ.ಗೆ ರೂ.81.80, ರೂ.76.66 ಮತ್ತು ರೂ.76.72 ಆಗಿವೆ.

ಡೀಸೆಲ್ ಬೆಲೆಗಳೂ ಹೊಸ ದಾಖಲೆಯ ಮಟ್ಟವನ್ನು ತಲುಪಿವೆ.

ಮಂಗಳವಾರ ಈ ಮೂರು ಮಹಾನಗರಗಳಲ್ಲಿ ಪ್ರತಿ ಲೀ.ಡೀಸಿಲ್ ಬೆಲೆ ರೂ.69.02, ರೂ.67.51 ಮತ್ತು 68.38 ಆಗಿದ್ದರೆ ದಿಲ್ಲಿಯಲ್ಲಿ ರೂ.64.82ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News