×
Ad

ಕಾಶ್ಮೀರದಲ್ಲಿ ವ್ಯಕ್ತಿಯನ್ನು ಅಪಹರಿಸಿ ಹತ್ಯೆಗೈದ ಉಗ್ರರು

Update: 2018-04-03 21:00 IST

ಶ್ರೀನಗರ, ಎ.3: ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ ನಂತರ ಹತ್ಯೆಗೈದ ಘಟನೆ ಉತ್ತರ ಕಾಶ್ಮೀರದ ಬಂಡಿಪೊರ ಜಿಲ್ಲೆಯ ಹಜಿನ್ ಪಟ್ಟಣದಲ್ಲಿ ನಡೆದಿದೆ. ಹತ್ಯೆಗೀಡಾದ 26ರ ಹರೆಯದ ಫಾರೂಕ್ ಅಹ್ಮದ್ ಮೃತದೇಹವು ಅವರ ಮನೆಯ ಸಮೀಪದ ಶಹಗುಂದ್ ಎಂಬ ತೊರೆಯ ಸಮೀಪ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಫಾರೂಕ್ರನ್ನು ಅವರ ಪತ್ನಿಯ ಹೆತ್ತವರ ಮನೆಯಿಂದ ಸೋಮವಾರ ರಾತ್ರಿ ಸುಮಾರು 10.15ರ ಹೊತ್ತಿಗೆ ಉಗ್ರರು ಅಪಹರಣ ಮಾಡಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಮನೆಯೊಳಗೆ ಅಕಮವಾಗಿ ಪ್ರವೇಶಿಸಿದ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ನಾಲ್ವರು ಉಗ್ರರು ಯದ್ವಾತದ್ವಾ ಗುಂಡಿನ ಮಳೆಗರೆದಿದ್ದಾರೆ. ಈ ದಾಳಿಯಲ್ಲಿ ಮನೆಯಲ್ಲಿದ್ದ ನಾಸೀರ್ ಪತ್ನಿ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News