×
Ad

ಅರ್ಧದಲ್ಲೇ ಶಾಲೆ ಬಿಟ್ಟ ಈ ಹುಡುಗ ಫೋರ್ಬ್ಸ್ ನ ಪ್ರತಿಷ್ಠಿತ ಅಂಡರ್-30 ಪಟ್ಟಿಯಲ್ಲಿ

Update: 2018-04-03 21:48 IST

ಹೊಸದಿಲ್ಲಿ, ಎ.3: ಅರ್ಧದಲ್ಲೇ ಶಾಲೆ ಬಿಟ್ಟ ಹುಡುಗನೊಬ್ಬ ಇಂದು ಸೈಬರ್ ಭದ್ರತಾ ತಜ್ಞನಾಗಿ ಖ್ಯಾತಿ ಗಳಿಸಿದ್ದು, ಫೋರ್ಬ್ಸ್ ನ ಪ್ರತಿಷ್ಠಿತ '30 ಅಂಡರ್ 30' ಪಟ್ಟಿಯಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾನೆ.

ಚಂಡೀಗಢದ ನಿವಾಸಿ ತ್ರಿಶ್ನೀತ್ ಅರೋರಾ (25) ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಏಷ್ಯಾದ ಉತ್ತಮ ಭವಿಷ್ಯಕ್ಕಾಗಿ ತಮ್ಮ ಉದ್ಯಮವನ್ನು ಮರುರೂಪಿಸಿಕೊಂಡಿರುವ ಅನುಶೋಧಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಅರೋರಾ ಸೈಬರ್ ಭದ್ರತಾ ತಜ್ಞರಾಗಿದ್ದು, ಲೇಖಕ ಹಾಗೂ ಟಿಎಸಿ ಸೆಕ್ಯುರಿಟಿ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಈ ಸಂಸ್ಥೆಯ ಕೇಂದ್ರ ಕಚೇರಿ ಮೊಹಾಲಿಯಲ್ಲಿದೆ. ಟಿಎಸಿ ಸೆಕ್ಯುರಿಟಿ ಮುಖ್ಯವಾಗಿ ಹ್ಯಾಕಿಂಗ್ ಸಾಧ್ಯತೆಯ ಮೌಲ್ಯಮಾಪನ ಮಾಡುತ್ತದೆ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಅವುಗಳ ಸೈಬರ್ ಭದ್ರತಾ ದೌರ್ಬಲ್ಯಗಳ ಬಗ್ಗೆ ತಪಾಸಣೆಗಳನ್ನು ನಡೆಸುತ್ತದೆ.

2017ರಲ್ಲಿ ಜಿಕ್ಯೂ ನಿಯತಕಾಲಿಕದ 50 ಪ್ರಭಾವಿ ಯುವ ಭಾರತೀಯರ ಪಟ್ಟಿಯಲ್ಲಿ ಅರೋರಾ ಸೇರ್ಪಡೆಯಾಗಿದ್ದರು.ಇದೀಗ ಇವರ ಹೆಸರು 30 ಅಂಡರ್ 30 ಏಷ್ಯಾ 2018 ಪಟ್ಟಿಯ ಎಂಟರ್ ಪ್ರೈಸ್ ಟೆಕ್ನಾಲಜಿ ವಿಭಾಗದಲ್ಲಿ ಸೇರ್ಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News