ಮದುವೆಗೂ ಬೇಕು ಅನುಮತಿ!

Update: 2018-04-03 18:31 GMT

ಮಾನ್ಯರೇ,

ಮದುವೆಯಂತಹ ಶುಭಕಾರ್ಯಗಳು ಹಲವು ತಿಂಗಳಕಾಲ ಮುಂಚೆಯೇ ನಿಗದಿಯಾಗಿದ್ದು ಅಂತಹ ಕೌಟುಂಬಿಕ ಶುಭಕಾರ್ಯಗಳಿಗೂ ಕೆಲವು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆಗಳು ಅಡ್ಡಿಯಾಗುತ್ತಿರುವುದು ಖೇದಕರ.
ರಾಜಕಾರಣಿಗಳು ಎಸಗುವ ನೀತಿ ಸಂಹಿತೆ ಉಲ್ಲಂಘಿಸುವ ಕೃತ್ಯಗಳಿಗೆ ಬೆಲೆಯಾಗಿ ಜನಸಾಮಾನ್ಯರು ತಮ್ಮ ಖಾಸಗಿ ಕಾರ್ಯಕ್ರಮಗಳಿಗೂ ಜಿಲ್ಲಾಧಿಕಾರಿಗಳ ಅನುಮತಿ ಬೇಡಬೇಕಾದುದು ಪ್ರಜಾಪ್ರಭುತ್ವದ ಅಣಕವೇ?

Similar News