ಹುಸಿ ಬಾಂಬ್ ಕರೆ: ಸಿಂಗಾಪುರಕ್ಕೆ ಮರಳಿದ ವಿಮಾನ

Update: 2018-04-05 18:08 GMT

ಸಿಂಗಾಪುರ, ಎ. 5: ಸಿಂಗಾಪುರದ ವಿಮಾನವೊಂದರಲ್ಲಿ ಪ್ರಯಾಣಿಕನೊಬ್ಬ ತನ್ನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಹಾಕಿದಾಗ ಯುದ್ಧವಿಮಾನಗಳು ವಿಮಾನವನ್ನು ಮರಳಿ ಸಿಂಗಾಪುರಕ್ಕೆ ಕರೆ ತಂದ ಘಟನೆ ಗುರುವಾರ ವರದಿಯಾಗಿದೆ. ಆದರೆ, ಅಂತಿಮವಾಗಿ ಅದೊಂದು ಹುಸಿ ಕರೆಯಾಗಿ ಪರಿಣಮಿಸಿತು ಎಂದು ಪೊಲೀಸರು ತಿಳಿಸಿದರು.

ಥಾಯ್ಲೆಂಡ್‌ನ ಹಾಟ್ ಯೈಗೆ ಹಾರುತ್ತಿದ್ದ ವಿಮಾನ ಅಂತಿಮವಾಗಿ ಸಿಂಗಾಪುರದ ಚಂಗಿ ವಿಮಾನ ನಿಲ್ದಾಣದಲ್ಲಿ ಅಪರಾಹ್ನ ಬಂದಿಳಿಯಿತು ಎಂದು ವಿಮಾನಯಾನ ಕಂಪೆನಿ ಸ್ಕೂಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ಪೊಲೀಸರು ವಿಮಾನ, ಪ್ರಯಾಣಿಕರ ಬ್ಯಾಗ್‌ಗಳು ಮತ್ತು ಬೆದರಿಕೆ ಹಾಕಿದ ಪ್ರಯಾಣಿಕನನ್ನು ತಪಾಸಣೆ ಮಾಡಿದರು. ಆದರೆ, ಯಾವುದೇ ಬಾಂಬ್‌ಗಳು ಪತ್ತೆಯಾಗಲಿಲ್ಲ.

ಬಳಿಕ ಪೊಲೀಸರು 41 ವರ್ಷದ ಪ್ರಯಾಣಿಕನನ್ನು ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News