ಟಿವಿಯಲ್ಲಿ ಫೇಲ್ ಆದ ಮೇಲೆ ಟ್ವಿಟರ್ ನಲ್ಲಿ ಕಪಿಲ್ ಶರ್ಮಾ ಶೋ!

Update: 2018-04-06 16:32 GMT

ಹೊಸದಿಲ್ಲಿ, ಎ.6: ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ಕಿರುತೆರೆಯಿಂದ ದೂರವಾದ ನಂತರ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಇಂದು (ಶುಕ್ರವಾರ) ಕಪಿಲ್ ಶರ್ಮಾ ಅವರ ಕೆಲವು ಟ್ವೀಟ್ ಗಳು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಟೀಕಾಕಾರರ ವಿರುದ್ಧ ತೀರಾ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿದ್ದ ಕಪಿಲ್ ನಂತರ "ನನ್ನ ಖಾತೆಯು ಹ್ಯಾಕ್ ಆಗಿತ್ತು" ಎಂದು ಹೇಳಿದ್ದಾರೆ.

ಅವರ ತಡರಾತ್ರಿಯ ಟ್ವೀಟ್‍ಗಳು ಈ ಹಿಂದೆ ಕೂಡಾ ವಿವಾದಕ್ಕೆ ಕಾರಣವಾಗಿದ್ದವು. ಶುಕ್ರವಾರ ಕಪಿಲ್ ಹಲವು ಬಾರಿ ಟ್ವೀಟ್ ಮಾಡಿದ್ದು, ಪ್ರತಿ ಟ್ವೀಟ್‍ಗಳಲ್ಲಿ ಆಕ್ಷೇಪಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಕ್ಷಣ ಅವುಗಳನ್ನು ಡಿಲೀಟ್ ಮಾಡಿದ್ದಾರೆ. "ಸಿಂಹವನ್ನು ಬೇಟೆ ಮಾಡಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ನಾನು ಭೇಟಿ ಮಾಡಿದ್ದೇನೆ. ಸಲ್ಮಾನ್ ಜನರಿಗೆ ನೆರವಾಗುತ್ತಿದ್ದಾರೆ. ಅವರು ಉತ್ತಮ ವ್ಯಕ್ತಿ. ಅವರು ಅದನ್ನು ಮಾಡಿದ್ದಾರೆಯೇ ಇಲ್ಲವೇ ಎನ್ನುವುದು ನನಗೆ ತಿಳಿಯದು. ಆದರೆ ವ್ಯವಸ್ಥೆ ಹಾಳಾಗಿದೆ. ನನ್ನನ್ನು ಉತ್ತಮ ಕೆಲಸ ಮಾಡಲು ಬಿಡಿ" ಎಂದು ಕಪಿಲ್ ಶರ್ಮಾ ಖಾತೆಯಿಂದ ಸಂಬಂಧವೇ ಇಲ್ಲದ ಟ್ವೀಟ್ ಮಾಡಲಾಗಿತ್ತು.

"ಮಾಧ್ಯಮಗಳು ಋಣಾತ್ಮಕ ಸುದ್ದಿ ಹರಡಬೇಡಿ", "ನಾನು ಪ್ರಧಾನಿಯಾಗಿದ್ದರೆ, ಸುಳ್ಳುಸುದ್ದಿ ಹರಡುವವರನ್ನು ಗಲ್ಲಿಗೇರಿಸುತ್ತಿದ್ದೆ" ಎಂದೂ ಕಪಿಲ್ ಶರ್ಮಾ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಆನಂತರದಲ್ಲಿ ಕೆಲವು ತೀರಾ ಕೆಳಮಟ್ಟದ ಭಾಷೆಯನ್ನುಪಯೋಗಿಸಿ ಕೂಡ ಟ್ವೀಟ್ ಮಾಡಲಾಗಿತ್ತು.

ಸುನೀಲ್ ಗ್ರೋವರ್ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋನಿಂದ ಹೊರನಡೆದ ನಂತರ ಕಪಿಲ್ ಶರ್ಮಾ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News