ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ : ಚಂದ್ರಬಾಬು ನಾಯ್ಡು ಅವರಿಂದ ಸೈಕಲ್ ರ‍್ಯಾಲಿ

Update: 2018-04-06 18:30 GMT

ಅಮರಾವತಿ, ಎ. 6: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರ ಸೈಕಲ್ ರ‍್ಯಾಲಿ ನಡೆಸಿದರು.

ವೆಂಕಟಾಪಾಲೇಮ್ ಗ್ರಾಮದಿಂದ ರಾಜ್ಯ ಸೆಕ್ರೇಟರಿಯೇಟ್ ವರೆಗೆ ಸೈಕಲ್ ರ‍್ಯಾಲಿ ನಡೆಸಿದ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿದರು. ರಾಜ್ಯ ಮರು ಸಂಘಟನೆ ಕಾಯ್ದೆ ಅಡಿ ಏಕೀಕೃತ ಆಂಧ್ರಪ್ರದೇಶವನ್ನು ವಿಭಾಗಿಸುವ ಸಂದರ್ಭ ಎನ್‌ಡಿಎ ನೀಡಿದ ಎಲ್ಲ ಭರವಸೆಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಚಂದ್ರಬಾಬು ನಾಯ್ಡು ಆಗ್ರಹಿಸಿದರು.

ಚಂದ್ರಬಾಬು ನಾಯ್ಡು ಅವರು ಟಿಡಿಪಿ ಸ್ಥಾಪಕ ಎನ್.ಟಿ. ರಾಮ ರಾವ್ ಪ್ರತಿಮೆಗೆ ಹೂವಿನ ಹಾರ ಹಾಕಿ ಆನಂತರ ಸೈಕಲ್ ರ‍್ಯಾಲಿ ಆರಂಭಿಸಿದರು. ರ‍್ಯಾಲಿಯಲ್ಲಿ ಟಿಡಿಪಿ ಶಾಸಕರು, ಎಂಎಲ್‌ಸಿ ಹಾಗೂ ಪಕ್ಷದ ನಾಯಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News