ದೇಶದ ದಲಿತರನ್ನು ಕಡೆಗಣಿಸುತ್ತಿರುವ ಕೇಂದ್ರ ಸರಕಾರ
Update: 2018-04-07 14:49 IST
ಹೊಸದಿಲ್ಲಿ, ಎ.7: ಕೇಂದ್ರ ಸರಕಾರವು ದೇಶದಲ್ಲಿರುವ ದಲಿತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಬಿಜೆಪಿಯ ದಲಿತ ಸಂಸದ ಯಶ್ವಂತ್ ಸಿಂಗ್ ಪ್ರಧಾನಿ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.
ತಾನು ಮೀಸಲಾತಿಯಿಂದಲೇ ಸಂಸದನಾಗಿದ್ದೇನೆ. ನಾನು ದಲಿತನಾಗಿದ್ದರಿಂದ ನನ್ನ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗಲಿಲ್ಲ. ಮೀಸಲಾತಿಯಿಂದಲೇ ನಾನು ಸಂಸದನಾದೆ. ಆಡಳಿತದ ನಾಲ್ಕು ವರ್ಷಗಳಲ್ಲಿ 30 ಕೋಟಿ ದಲಿತರಿಗೆ ಕೇಂದ್ರ ಸರಕಾರ ಏನನ್ನೂ ಮಾಡಿಲ್ಲ” ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಮರುಪರಿಶೀಲಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಆದಿತ್ಯನಾಥ್ ನೇತೃತ್ವದ ಸರಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಚೋಟೆ ಲಾಲ್ ಪ್ರಧಾನಿಗೆ ಪತ್ರ ಬರೆದಿದ್ದರು.