ಹೈಕೋರ್ಟ್ ಗಳಿಗೆ 6 ನ್ಯಾಯಾಧೀಶರ ಹೆಸರು ಸೂಚಿಸಿದ ಸುಪ್ರೀಂ ಕೋರ್ಟ್ ಮಂಡಳಿ

Update: 2018-04-07 14:40 GMT

ಹೊಸದಿಲ್ಲಿ, ಎ.7: ಗುವಾಹತಿ ಉಚ್ಚ ನ್ಯಾಯಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯಕ್ಕೆ ಶಾಶ್ವತ ನ್ಯಾಯಾಧೀಶರಾಗಿ ನೇಮಕ ಮಾಡಲು ಸರ್ವೋಚ್ಚ ನ್ಯಾಯಾಲಯ ಮಂಡಳಿಯು ಶನಿವಾರ ಆರು ಹೆಸರುಗಳನ್ನು ಸೂಚಿಸಿದೆ.

ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಮಂಡಳಿಯು, ನ್ಯಾಯಿಕ ಅಧಿಕಾರಿ ರಶೀದ್ ಅಲಿ ದರ್, ನ್ಯಾಯವಾದಿ ವಾಸಿಂ ಸಾದಿಕ್ ನರ್ಗಲ್, ನಝೀರ್ ಅಹಮದ್ ಬೇಗ್ ಮತ್ತು ಸಿಂಧು ಶರ್ಮಾರನ್ನು ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆ ಮಾಡಿದೆ.

ಗುವಾಹತಿ ಹೈ ಕೋರ್ಟ್‌ಗೆ ನ್ಯಾಯವಾದಿ ಸಂಜಯ್ ಕುಮಾರ್ ಮೇಧಿ ಮತ್ತು ನಾನಿ ತಗಿಯಾರನ್ನು ನ್ಯಾಯಾಧೀಶರಾಗಿ ಮಂಡಳಿ ಆಯ್ಕೆ ಮಾಡಿದೆ. ಈ ಆಯ್ಕೆಗಳನ್ನು ಮಾಡುವ ವೇಳೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಜೊತೆ ಹಿರಿಯ ನ್ಯಾಯಾಧೀಶರಾದ ಜೆ. ಚೆಲಮೇಶ್ವರ್ ಹಾಗೂ ರಂಜನ್ ಗೊಗೊಯಿ ಉಪಸ್ಥಿತರಿದ್ದರು ಎಂದು ಮಂಡಳಿ ತಿಳಿಸಿದೆ. ಹೈಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡುವುದಕ್ಕೂ ಮೊದಲು ಮಂಡಳಿಯು ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿದೆ ಎಂದು ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News