ಮಾಲಿನ್ಯ ನಿಯಮ ಉಲ್ಲಂಘನೆ: 7000 ಬಸ್‌ಗಳ ವಿರುದ್ಧ ಪ್ರಕರಣ ದಾಖಲು

Update: 2018-04-07 16:19 GMT

ಹೊಸದಿಲ್ಲಿ, ಎ. 6: ಕಳೆದ ಆರು ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಮಟ್ಟ ಉಲ್ಲಂಘಿಸಿದ ಸುಮಾರು 7000 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಅತಿ ಹೆಚ್ಚಿನ ಬಸ್‌ಗಳು ನೆರೆಯ ರಾಜ್ಯಕ್ಕೆ ಸೇರಿದ್ದು ಎಂದು ದಿಲ್ಲಿ ಸರಕಾರ ರಾಜ್ಯ ವಿಧಾನ ಸಭೆಗೆ ಮಾಹಿತಿ ನೀಡಲಾಯಿತು.

2012-13ರಿಂದ 2018 ಫೆಬ್ರವರಿ ವರೆಗೆ ಸೂಕ್ತ ಪಿಯುಸಿ (ಪೊಲ್ಯುಶನ್ ಅಂಡರ್ ಚೆಕ್) ಪ್ರಮಾಣ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಒಟ್ಟು 7,219 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿಲ್ಲಿ ಸಾರಿಗೆ ಸಚಿವ ಕೈಲಾಸ್ ಗೆಹ್ಲೋಟ್ ವಿಧಾನ ಸಭೆ ಅಧಿವೇಶನದ ಸಂದರ್ಭ ಹೇಳಿದರು. ಪಿಯುಸಿ ಹೊಂದಿರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾದ ಅತ್ಯಧಿಕ 3,328 ಬಸ್‌ಗಳು ಉತ್ತರಪ್ರದೇಶಕ್ಕೆ ಸೇರಿದ್ದು. ಅನಂತರ ಸ್ಥಾನವನ್ನು ರಾಜಸ್ಥಾನ ಪಡೆದುಕೊಂಡಿದೆ. ಇಲ್ಲಿನ 2.064 ಬಸ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ದಿಲ್ಲಿಯ 643 ಬಸ್‌ಗಳು ಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News