×
Ad

ಎ.13ರಂದು ಜಶ್ನೆ ಮುಶಾಯಿರಾ

Update: 2018-04-08 22:30 IST

ಹೊಸದಿಲ್ಲಿ, ಎ.8: ಅಮೆರಿಕ, ಜಪಾನ್ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ಉರ್ದು ಕವಿಗಳು ದಿಲ್ಲಿಯಲ್ಲಿ ಎ.13ರಂದು ನಡೆಯಲಿರುವ ‘ಜಶ್ನೆ ಬಹಾರ್’ ವಾರ್ಷಿಕ ಮುಶಾಯಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಾಭ ನಿರಪೇಕ್ಷ ಸಂಸ್ಥೆಯಾಗಿರುವ ಜಶ್ನೆ ಬಹಾರ್ ಟ್ರಸ್ಟ್ ಆಯೋಜಿಸಿರುವ 20ನೆಯ ಮುಶೈರ ಕಾರ್ಯಕ್ರಮದಲ್ಲಿ ಕೆನಡಾದ ತಾಖಿ ಆಬಿದಿ, ಜಪಾನ್‌ನ ಸೊ ಯಮಾನೆ, ಸೌದಿ ಅರೆಬಿಯಾದ ಉಮರ್ ಸಲೀಮ್ ಅಲ್- ಹೈದ್ರೋಸ್, ಭಾರತದ ಖ್ಯಾತ ಕವಿಗಳಾದ ವಾಸಿಂ ಬರೇಲ್ವಿ, ಮನ್ಸೂರ್ ಉಸ್ಮಾನಿ, ಲಕ್ಷ್ಮೀ ಶಂಕರ್ ಬಾಜ್‌ಪಾಯ್, ಶಬೀನಾ ಅದೀಬ್, ಗೌಹರ್ ರಝಾ, ದೀಪ್ತಿ ಮಿಶ್ರ, ಇಕ್ಬಾಲ್ ಅಶ್ಹರ್, ಮಂಝರ್ ಭೊಪಾಲಿ, ಮೀನು ಬಕ್ಷಿ ಸಾಹಿಬ, ರೆಹಾನ ನವಾಬ್, ಲಿಯಾಖತ್ ಜಫ್ರಿ, ಹುಸೈನ್ ಹೈದರಿ ಪಾಲ್ಗೊಳ್ಳಲಿದ್ದಾರೆ . ದಿಲ್ಲಿಯ ಮಥುರಾ ರಸ್ತೆಯ ದಿಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಜಶ್ನೆ ಬಹಾರ್ ಟ್ರಸ್ಟ್‌ನ ಸ್ಥಾಪಕರಾದ ಕಾಮ್ನಾ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News