ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ 19ರ ಹರೆಯದ ರಿದ್ಧಿ ಸೇನ್

Update: 2018-04-13 10:00 GMT

ಹೊಸದಿಲ್ಲಿ, ಎ.13: 65ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟಗೊಂಡಿದ್ದು, ಮಾಮ್ ಚಿತ್ರದ ನಟನೆಗಾಗಿ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದರೆ, ಬೆಂಗಾಲಿ ಚಿತ್ರ ‘ನಗರ್ ಕೀರ್ತನ್’ನ ನಟನೆಗಾಗಿ 19ರ ಹರೆಯದ ರಿದ್ಧಿ ಸೇನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ನಟ 2016ರ ಆಸ್ಕರ್ ನಾಮನಿರ್ದೇಶಿತ ‘ಲಯನ್’, ‘ಕಹಾನಿ’, ‘ಪರ್ಚೇದ್’ ಚಿತ್ರಗಳಲ್ಲಿ ನಟಿಸಿದ್ದಾರೆ. ನಗರ್ ಕೀರ್ತನ್ ಚಿತ್ರವನ್ನು ಕೌಶಿಕ್ ಗಂಗೂಲಿ ನಿರ್ದೇಶಿಸಿದ್ದು, ಈ ಚಿತ್ರಕ್ಕಾಗಿ ಅವರು ವಿಶೇಷ ಜ್ಯೂರಿ ಅವಾರ್ಡ್ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News