ಭಾರತದ ಅತ್ಯಂತ ದುಬಾರಿ ಸ್ಕೂಟರ್‌ಗೆ ಹಲೋ ಎನ್ನಲು ಸಜ್ಜಾಗಿ...

Update: 2018-04-13 11:09 GMT

ಭಾರತದ ಆರ್ಥಿಕತೆಯು ಬೆಳೆಯುವುದರೊಂದಿಗೆ ವಿದೇಶಿ ಕಂಪನಿಗಳು ತಮ್ಮ ಪ್ರಸಿದ್ಧ ಬ್ರಾಂಡ್‌ಗಳೊಂದಿಗೆ ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ಬ್ರಿಟನ್ನಿನ ಸ್ಕೋಮಾದಿ ಕಂಪನಿ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಈ ಕಂಪನಿಯ ಹೆಸರನ್ನು ಬಹುಶಃ ನೀವು ಕೇಳಿರಲಿಕ್ಕಿಲ್ಲ. ಆದರೆ ಅದು ಟೂರಿಸ್ಮೊ ಲೆಗ್ಗೇರಾ 50, ಟಿಎಲ್ 125, ಟಿಎಲ್ 200 ಮತ್ತು ಟಿಟಿ 200ಐನಂತಹ ಲ್ಯಾಂಬ್ರೆಟ್ಟಾ ಜಿಪಿ ಶೈಲಿಯ ಸ್ಕೂಟರ್‌ಗಳ ನಿರ್ಮಾಣದಲ್ಲಿ ಸುದೀರ್ಘ ಪರಂಪರೆಯನ್ನು ಹೊಂದಿದೆ. ಚೀನಿ ಕಂಪನಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡಿರುವ ಸ್ಕೋಮಾದಿ ಅತ್ಯುತ್ತಮ ಗುಣಮಟ್ಟದ ಸ್ಕೂಟರ್‌ಗಳ ನಿರ್ಮಾಣಕ್ಕಾಗಿ ಥೈಲಂಡ್‌ನಲ್ಲಿ ಘಟಕವನ್ನು ಸ್ಥಾಪಿಸಿದೆ.

ಪುಣೆಯ ಎಜೆ ಪರ್ಫಾರ್ಮನ್ಸ್ ಜೊತೆಗೆ ಸಹಭಾಗಿತ್ವದೊಡನೆ ಸ್ಕೋಮಾದಿ ಭಾರತದ ಮಾರುಕಟ್ಟೆಗೆ ತನ್ನ ಸ್ಕೂಟರ್‌ಗಳನ್ನು ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಆರಂಭದಲ್ಲಿ ಟಿಟಿ 125 ಮಾದರಿಯನ್ನು ಅದು ಪರಿಚಯಿಸಲಿದ್ದು, ಇದನ್ನು ಥೈಲಂಡ್‌ನಿಂದ ಆಮದು ಮಾಡಿಕೊಳ್ಳಲಾಗುವುದು. ಪುಣೆಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ 1.98 ಲ.ರೂ.ಆಗಿರಲಿದೆ. ಬಿಡಿಭಾಗಗಳಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಇದು ಇಂದು ಭಾರತದಲ್ಲಿ ಅತ್ಯಂತ ದುಬಾರಿ ಸ್ಕೂಟರ್ ಎನಿಸಿಕೊಂಡಿರುವ ವೆಸ್ಪಾವನ್ನು ಮೀರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News