ಬಾಕ್ಸ್ಆಫೀಸ್‌ನಲ್ಲಿ ಬಾಗಿ 2 ಭರ್ಜರಿ ಓಟ

Update: 2018-04-13 17:51 GMT

ಬಿಡುಗಡೆಯಾಗಿ ಎರಡು ವಾರ ಕಳೆದರೂ ಟೈಗರ್ ಶ್ರಾಫ್ ಹಾಗೂ ದಿಶಾ ಪಠಾನಿ ನಟನೆಯ ‘ಬಾಗಿ 2’ ಚಿತ್ರದ ಓಟ ನಿಲ್ಲುವಂತೆ ಕಾಣುತ್ತಿಲ್ಲ. ಈ ಚಿತ್ರ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಉತ್ತಮ ಹಣ ಗಳಿಸುತ್ತಿದೆ. ಬಾಗಿ 2 ತನ್ನ ಎರಡನೇ ವಾರದಲ್ಲಿ ಕೂಡ ಉತ್ತಮ ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಮೂಡಿ ಬರುತ್ತಿದೆ. ಇದರೊಂದಿಗೆ ಇದು ಟೈಗರ್‌ನ ಕೆರಿಯರ್‌ನಲ್ಲಿ ಅತಿ ದೊಡ್ಡ ತಿರುವು ಆಗಲಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಚಿತ್ರದ ಓಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಇತ್ತೀಚೆಗಿನ ಅಂಕಿ-ಅಂಶಗಳು ಹೇಳುತ್ತಿವೆ. ಚಿತ್ರ ಭಾರತದಲ್ಲಿ ಈಗಾಗಲೇ 175.95 ಕೋ. ರೂ. ಬಾಚಿದೆ. ಜಾಗತಿಕ ಮಾರುಕಟ್ಟೆಯಲ್ಲಿ 39.38 ಕೋ. ರೂ. ಬಾಚಿದೆ. ಚಿತ್ರದ ಒಟ್ಟು ಕಲೆಕ್ಷನ್ 215.33 ಕೋ. ರೂ. ಈ ಚಿತ್ರದ ಬಗ್ಗೆ ಜನಪ್ರಿಯ ವ್ಯಾಪಾರ ವಿಶ್ಲೇಷಕ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ‘‘ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾಗಿ 2 ಅಚ್ಚರಿ ಮೂಡಿಸುವುದನ್ನು ಮುಂದುವರಿಸಿದೆ. ವಿದೇಶಗಳಲ್ಲಿ ಆ್ಯಕ್ಷನ್ ಚಿತ್ರಗಳಿಗೆ ಬೇಡಿಕೆ ಇಲ್ಲ ಎಂಬ ಮಿಥ್ಯೆಯನ್ನು ಹುಸಿಗೊಳಿಸಿದೆ’’ ಎಂದಿದ್ದಾರೆ. 2018ರಲ್ಲಿ ಅತ್ಯಧಿಕ ಹಣ ಸಂಗ್ರಹಿಸಿದ ಚಿತ್ರಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತ್’ ನಂತರದ ಸ್ಥಾನವನ್ನು ಸಜಿದ್ ನಾಡಿಯಾಡ್‌ವಾಲಾ ಅವರ ಬಾಗಿ 2 ಸಂಗ್ರಹಿಸಿದೆ. ಮನೋಜ್ ವಾಜಪೇಯಿ, ರಣದೀಪ್ ಹೂಡಾ, ಪ್ರತೀಕ್ ಬಬ್ಬರ್ ಹಾಗೂ ದೀಪಕ್ ದೊಬ್ರಿಯಲ್ ಈ ಚಿತ್ರದಲ್ಲಿ ಕೂತೂಹಲಕಾರಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News