ಓಂಪುರಿ ಅಭಿನಯದ ಕೊನೆ ಚಿತ್ರ 'ಗಾಂಧಿ ಹತ್ಯಾ' ಬಿಡುಗಡೆಗೆ ರೆಡಿ

Update: 2018-04-15 05:08 GMT

ಮೇರು ನಟ ಓಂ ಪುರಿ ಅವರ ಕೊನೆಯ ಚಿತ್ರ ಕಬೀರ್ ಖಾನ್ ಅವರ ಟ್ಯೂಬ್‌ಲೈಟ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಅವರ ಕೊನೆಯ ಚಿತ್ರವಲ್ಲ. ಅವರ ಕೊನೆಯ ಚಿತ್ರ ಇನ್ನಷ್ಟೇ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಿಡುಗಡೆಯಾಗಲಿದೆ. ಹಾಲಿವುಡ್ ಹಾಗೂ ಬಾಲಿವುಡ್ ಸಿನಿ ಪ್ರಯಾಣದಲ್ಲಿ ಓಂ ಪುರಿ ಅವರು ಹಲವು ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಲಕ್ಷೀ ಜಿ. ಅಯ್ಯರ್ ನಿರ್ಮಾಣದ ‘ಗಾಂಧಿ: ದಿ ಕಾನ್‌ಸ್ಪಿರೆಸಿ’ (ಗಾಂಧಿ ಹತ್ಯಾ: ಏಕ್ ಸಾಝಿಶ್)ಯಲ್ಲಿ ಕೂತೂಹಲಕಾರಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಅಲ್ಜೀರಿಯನ್ ಚಿತ್ರ ನಿರ್ದೇಶಕ ಕರೀಂ ಟ್ರೈಡಿಯಾ ನಿರ್ದೇಶಿಸಿದ್ದಾರೆ.

‘ಗಾಂಧಿ: ದಿ ಕಾನ್‌ಸ್ಪಿರೆಸಿ’ ಯಲ್ಲಿ ಓಂಪುರಿ ಅವರೊಂದಿಗೆ ಕೆಲಸ ಮಾಡಿರುವುದನ್ನು ನಿರ್ಮಾಪಕಿ ಲಕ್ಷ್ಮೀ ಆರ್. ಅಯ್ಯರ್ ನೆನಪಿಸಿಕೊಂಡದ್ದು ಹೀಗೆ: ‘‘ಓಂ ಸರ್ ಅದ್ಭುತ ನಟ. ಮಹಾನ್ ಮಾನವತಾವಾದಿ. ಹಳೆಯ ಪಂಥದ ನಟರಾಗಿರುವ ಅವರು ಸ್ಕ್ರಿಪ್ಟ್ ಓದಿದರು ಹಾಗೂ ಎರಡೇ ದಿನಗಳಲ್ಲಿ ಪಾತ್ರ ಮಾಡಲು ಒಪ್ಪಿಕೊಂಡರು. ಅವರೊಂದಿಗೆ ಕೆಲಸ ಮಾಡುವುದು ಒಂದು ವರ. ಅಭೂತಪೂರ್ವ ಕಲಿಕೆಯ ಅನುಭವ’’. ಮಹಾತ್ಮಾ ಗಾಂಧಿ ಅವರನ್ನು ಕೇಂದ್ರೀಕರಿಸಿ ಹಲವು ಚಿತ್ರಗಳು ಬಂದಿವೆ. ಈ ಚಿತ್ರ ಕೊಂಚ ತಿಳಿಯದೇ ಇರುವ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದೆ ಎಂದು ಲಕ್ಷೀ ಅವರು ಹೇಳಿದ್ದಾರೆ. ಅವರು ಹೀಗೆ ವಿವರಿಸುತ್ತಾರೆ: ‘‘ನಾನು ಗಾಂಧೀಜಿ ಅವರ ಅಹಿಂಸೆ ಸಿದ್ದಾಂತವನ್ನು ಪ್ರೀತಿಸುತ್ತೇನೆ. 68 ವರ್ಷಗಳ ಹಿಂದೆ ಟ್ವಿಟರ್, ಫೇಸ್‌ಬುಕ್ ಇಲ್ಲದ ಸಂದರ್ಭದಲ್ಲಿ ಸಾಮೂಹಿಕ ಹೋರಾಟ ರೂಪಿಸಿದ ಅವರ ಸಾಮರ್ಥ್ಯ ಮೆಚ್ಚುವಂತಹದ್ದು.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News