ರಾಝಿ ಟ್ರೇಲರ್‌ನಲ್ಲಿ ಮಿಂಚಿದ ಆಲಿಯಾ ಭಟ್

Update: 2018-04-13 18:49 GMT

ಆಲಿಯಾಭಟ್ ಅಭಿನಯದ ರಾಝಿ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದ್ದು, ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಎದುರು ವಿಕಿ ಕೌಶಲ್ ಅಭಿನಯಿಸಿದ್ದಾರೆ.

  ಹರೀಂದರ್‌ಸಿಕ್ಕಾ ಅವರ ‘ಕಾಲಿಂಗ್ ಸೆಹ್ಮತ್’ ಇಂಗ್ಲಿಷ್ ಕಾದಂಬರಿಯನ್ನು ಆಧರಿಸಿದ ರಾಝಿ, 1971ರ ಭಾರತ ಪಾಕ್ ಯುದ್ಧದ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿದೆ. ಪಾಕಿಸ್ತಾನಿ ಸೇನಾಧಿಕಾರಿಯೊಬ್ಬನನ್ನು ವಿವಾಹವಾಗಿ, ಆತನ ಮನೆಸೇರುವ ಕಾಶ್ಮೀರಿ ಯುವತಿಯೊಬ್ಬಳು ಭಾರತದ ಪರವಾಗಿ ಗೂಢಚಾರಿಕೆ ಮಾಡುವ ರೋಚಕ ಕಥೆ ಇದಾಗಿದೆ.ಅಂದಹಾಗೆ ಇದೊಂದು ನೈಜ ಘಟನೆ ಆಧರಿಸಿದ ಚಿತ್ರವೆಂದು ಹೇಳಲಾಗುತ್ತಿದೆ.

 ರಾಝಿಯ ಟ್ರೇಲರ್‌ನಲ್ಲಿಯೇ ಆಲಿಯಾ ಅಭಿನಯದ ಝಲಕ್‌ಗಳು ಅದ್ಭುತವಾಗಿ ಮೂಡಿಬಂದಿದ್ದು ಚಿತ್ರದ ಬಗ್ಗೆ ಸಿನೆಮಾ ಪ್ರೇಮಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಆಲಿಯಾಗೆ ರಾಝಿ, ಪ್ರಶಸ್ತಿಗಳ ಸುರಿಮಳೆಯನ್ನೇ ತಂದುಕೊಟ್ಟರೂ ಅಚ್ಚರಿಯೇನಿಲ್ಲವೆಂದು ಚಿತ್ರತಂಡದ ಮಂದಿ ಹೇಳುತ್ತಿದ್ದಾರೆ.

ಕರಣ್‌ಜೋಹರ್ ನಿರ್ಮಾಣದ ರಾಝಿಯಲ್ಲಿ ರಜಿತ್ ಕಪೂರ್,ಶಿಶಿರ್ ಶರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು,ಚಿತ್ರ ಮೇ 11ರಂದು ತೆರೆಕಾಣುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News