ಒತ್ತಡದಲ್ಲೂ ಉತ್ತಮ ಪ್ರದರ್ಶನ: ರಾಣಾ

Update: 2018-04-17 18:55 GMT

ಕೋಲ್ಕತಾ, ಎ.17: ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಬಾರಿಸಿದ 59 ರನ್ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 71 ರನ್‌ಗಳಿಂದ ಮಣಿಸಿದೆ. ತಾನು ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ರಾಣಾ ಹೇಳಿದ್ದಾರೆ.

‘‘ಒತ್ತಡದಲ್ಲೂ ನಾನು ಉತ್ತಮ ಪ್ರದರ್ಶನ ನೀಡಬಲ್ಲೆ ಎಂದು ಕಳೆದ ಬಾರಿ ನಾನು ನಿಮಗೆ ಹೇಳಿದ್ದೇನೆ. ಒತ್ತಡದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ’’ಎಂದು ರಾಣಾ ಹೇಳಿದ್ದಾರೆ.

ಆ್ಯಂಡ್ರೆ ರಸ್ಸೆಲ್(41 ರನ್,12 ಎಸೆತ) ಅವರು ರಾಣಾ(35 ಎಸೆತ, 59 ರನ್)ಜೊತೆಗೂಡಿ ಕೆಕೆಆರ್ ತಂಡ 9 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲು ನೆರವಾಗಿದ್ದರು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡ ಕೇವಲ 129 ರನ್‌ಗೆ ಆಲೌಟಾಗಿತ್ತು. ಸುನೀಲ್ ನರೇನ್(3-18) ಹಾಗೂ ಕುಲ್‌ದೀಪ್ ಯಾದವ್(3-32) ತಲಾ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

‘‘ಕಳೆದ ಸತತ ಎರಡು ಪಂದ್ಯಗಳಲ್ಲಿ ನಾವು ಸೋತಿದ್ದ ಕಾರಣ ಈ ಪಂದ್ಯ ನಮ್ಮ ತಂಡಕ್ಕೆ ಪ್ರಮುಖ ಪಂದ್ಯವಾಗಿತ್ತು’’ ಎಂದು ಈ ತನಕ 4 ಪಂದ್ಯಗಳಲ್ಲಿ 31.75ರ ಸರಾಸರಿಯಲ್ಲಿ ಒಟ್ಟು 127 ರನ್ ಗಳಿಸಿರುವ ರಾಣಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News