ಶ್ರೀಜಿತ್ ಕಸ್ಟಡಿ ಸಾವು: ತನಿಖೆಗೆ ವೈದ್ಯಕೀಯ ಮಂಡಳಿ ರಚನೆ

Update: 2018-04-18 10:50 GMT

ಕೊಚ್ಚಿ, ಎ.18: ವಾರಪ್ಪುಯ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಶ್ರೀಜಿತ್ ಮೃತಪಟ್ಟ ಘಟನೆ ಬಗ್ಗೆ  ತನಿಖೆ ನಡೆಸಲು ವಿಶೇಷ ಮೆಡಿಕಲ್ ಬೋರ್ಡ್‍ನ್ನು ರಚಿಸಲಾಗಿದೆ. ಶ್ರೀಜಿತ್‍ನನ್ನು ಹೊಡೆದು ಕೊಲ್ಲಲಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗಗೊಂಡ  ಹಿನ್ನೆಲೆಯಲ್ಲಿ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಕ್ರೈಂಬ್ರಾಂಚ್ ಪೊಲೀಸರ ಮನವಿಯ ಸಲುವಾಗಿ  ಡಾಕ್ಟರ್ ಆಫ್ ಮೆಡಿಕಲ್ ಎಜುಕೇಶನ್ ಬೋರ್ಡನ್ನು ರಚಿಸಲಾಗಿದ್ದು, ಐದು ಮಂದಿ ತಜ್ಞ ವೈದ್ಯರು ಸದಸ್ಯರಾಗಿದ್ದಾರೆ.

 ಮೆಡಿಕಲ್ ಬೋರ್ಡಿನಲ್ಲಿ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಫಾರೆನ್ಸಿಕ್ ವಿಭಾಗ ಮುಖ್ಯಸ್ಥೆ ಡಾ.ಕೆ.ಶಶಿಕಲಾ, ಆಲಪ್ಪುಳ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಉಣ್ಣಿಕೃಷ್ಣನ್, ತೃಶೂರ್ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ.ಶ್ರೀಕುಮಾರ್, ಕಲ್ಲಿಕೋಟೆ ಮೆಡಿಕಲ್ ಕಾಲೇಜಿನ ಗ್ಯಾಸ್ಟ್ರೋ ಎಂಟ್ರೋಲಜಿ ಪ್ರೊಫೆಸರ್ ಡಾ.ಪ್ರತಾಪನ್, ಕೋಟ್ಟಯಂ ಮೆಡಿಕಲ್ ಕಾಲೇಜಿನ ನೆಫ್ರಾಲಜಿ ವಿಭಾಗದ ಪ್ರೊಫೆಸರ್ ಡಾ. ಜಯಕುಮಾರ್ ಸದಸ್ಯರಾಗಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News