ಸಾವರ್ಕರ್ ಅತ್ಯಾಚಾರವನ್ನು ಒಂದು ರಾಜಕೀಯ ಅಸ್ತ್ರವಾಗಿ ಸಮರ್ಥಿಸಿದ್ದರೇ?

Update: 2018-04-18 18:48 GMT

ಭಾಗ-2

ರಾವಣನ ‘ನಾಚಿಕೆಗೇಡು ಧಾರ್ಮಿಕ ಮತಾಂಧತೆ’ಯಿಂದಾಗಿಯೇ ಮುಸ್ಲಿಮರು ಸುಲ್ತಾನನಿಂದ ಹಿಡಿದು ಸೈನಿಕರವರೆಗೆ, ಹಿಂದೂ ರಾಜರ ಕುಟುಂಬಗಳ ಮತ್ತು ಗಣ್ಯರ, ವಿವಾಹಿತ ಹಿಂದೂ ಸ್ತ್ರೀಯರೂ ಸೇರಿದಂತೆ, ಸ್ತ್ರೀಯರನ್ನು ಅಪಹರಿಸಿದರು. ಮುಸ್ಲಿಮರ ಜನಸಂಖ್ಯೆಯನ್ನು ಹೆಚ್ಚಿಸಲು ಜನಸಂಖ್ಯೆಯ ಮೂಲಕ ಭಾರತವನ್ನು ಗೆಲ್ಲಲು ಅವರು ಹೀಗೆ ಮಾಡಿದರು ಎನ್ನಬಹುದು. ತಮ್ಮ ಗಂಡಸರು ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿದಾಗ ಅದನ್ನು ಎಂದೂ ವಿರೋಧಿಸಿದ ಮುಸ್ಲಿಂ ಮಹಿಳೆಯರನ್ನು ‘‘ಅವರು ಬೇಗಂ ಇರಲಿ ಅಥವಾ ಭಿಕ್ಷುಕಿಯೇ ಇರಲಿ’’ ಸಾವರ್ಕರ್ ಉಗ್ರವಾಗಿ ಟೀಕಿಸುತ್ತಾರೆ. ಪ್ರತಿಭಟಿಸದೆ ‘‘ಅವರು ಅತ್ಯಾಚಾರವೆಸಗಲು ತಮ್ಮ ಪುರುಷರಿಗೆ ಉತ್ತೇಜನ ನೀಡಿದರು. ಆ ಕೃತ್ಯ ಎಸಗಿದ್ದಕ್ಕಾಗಿ ಅವರನ್ನು ಸನ್ಮಾನಿಸಿದರು’’ ಎನ್ನುತ್ತಾರೆ ಸಾವರ್ಕರ್.

‘ಸ್ತ್ರೀಯರಿಗೆ ಗೌರವ ಕೊಡುವ ಬಗ್ಗೆ ವಿಕೃತ ವಿಚಾರವನ್ನು ಹೊಂದಿದ್ದ’ ಹಿಂದೂ ಪುರುಷರಿಂದ ತಮಗೇನು ಮಾಡಲಾಗುವುದಿಲ್ಲ ಎಂಬ ಧೈರ್ಯವಿದ್ದುದರಿಂದಲೇ ಮುಸ್ಲಿಂ ಮಹಿಳೆಯರು ಹಿಂದೂ ಹುಡುಗಿಯರನ್ನು ಮೋಸದಿಂದ ಆಕರ್ಷಿಸಿ, ‘‘ಅವರನ್ನು ತಮ್ಮದೇ ಮನೆಗಳಲ್ಲಿ ಬಂಧನದಲ್ಲಿರಿಸಿ, ಬಳಿಕ ಅವರನ್ನು ಮಸೀದಿಯಲ್ಲಿರುವ ಮುಸ್ಲಿಂ ಕೇಂದ್ರಗಳಿಗೆ ಸಾಗಿಸುತ್ತಿದ್ದರು’’ ಎನ್ನುವ ಮಟ್ಟಕ್ಕೂ ಸಾವರ್ಕರ್ ವಾದಿಸುತ್ತಾರೆ. ‘‘ಹಿಂದೂಗಳು ತಮ್ಮ ಮುಸ್ಲಿಂ ಶತ್ರುಗಳನ್ನು ಸೋಲಿಸಿ ದಾಗಲೂ ಅವರು ಮುಸ್ಲಿಂ ಗಂಡಸರನ್ನು ಮಾತ್ರ ಶಿಕ್ಷಿಸುತ್ತಿದ್ದರು, ಮುಸ್ಲಿಂ ಸ್ತ್ರೀಯರನ್ನಲ್ಲ’’ ಎಂದು ಸಾವರ್ಕರ್ ಹೇಳುತ್ತಾರೆ.

ಶಿವಾಜಿ ತಪ್ಪು ಮಾಡಿದಾಗ
ಶಿವಾಜಿಯು ಕಲ್ಯಾಣದ ಮುಸ್ಲಿಂ ಸಾಮಂತನನ್ನು ಸೋಲಿಸಿದಾಗ ಅವನ ಸೊಸೆಯನ್ನು ಹಿಂದೆ ಕಳುಹಿಸಿದ ಶಿವಾಜಿಯನ್ನು ಪ್ರಶಂಸಿಸಿದವರನ್ನು ಸಾವರ್ಕರ್ ಟೀಕಿಸದೆ ಬಿಡುವುದಿಲ್ಲ. ಹಾಗೆಯೇ ಬಸ್ಸೀನ್‌ನ ಸಾಮಂತನ ಪೋರ್ಚುಗೀಸ್ ಮಡದಿಯನ್ನು ಅವಳಿಗೆ ಏನೂ ಮಾಡದೆ ಹಿಂದಕ್ಕೆ ಕಳುಹಿಸಿದ ಪೇಶ್ವಾ ಚಿಮಾಜಿ ಅಪ್ಪಾ(1707-1740)ನನ್ನು ಕೂಡಾ ಸಾವರ್ಕರ್ ಟೀಕಿಸುತ್ತಾರೆ.
‘‘ಹೀಗೆ ಸ್ತ್ರೀಯರನ್ನು ಹಿಂದಕ್ಕೆ ಕಳುಹಿಸಿದಾಗ ಶಿವಾಜಿ ಮಹಾರಾಜರಿಗಾಗಲಿ, ಚಿಮಾಜಿ ಅಪ್ಪಾನಿಗಾಗಲಿ, ಘಜನಿ ಮುಹಮ್ಮದ್, ಮುಹಮ್ಮದ್ ಗೋರಿ, ಅಲ್ಲಾವುದ್ದೀನ್ ಖಿಲ್ಜಿ ಮತ್ತು ಇತರರು ಹಿಂದೂ ಸ್ತ್ರೀಯರ ಮೇಲೆ ನಡೆಸಿದ್ದ ದೌರ್ಜನ್ಯಗಳು, ಅತ್ಯಾಚಾರಗಳು ಮತ್ತು ಮಾನಹರಣ ನೆನಪಾಗದಿದ್ದದ್ದು ಆಶ್ಚರ್ಯವಲ್ಲವೇ?’’
ಈ ಹಂತದಲ್ಲಿ ಸಾವರ್ಕರ್ ಅವರ ಉದ್ರೇಕಿತ ಕಲ್ಪನೆಗೆ ಗರಿ ಮೂಡಿ ಅದು ಭೋರ್ಗರೆಯುತ್ತದೆ:

‘‘ಆ ಮಿಲಿಯಗಟ್ಟಲೆ ಸಂತ್ರಸ್ತ ಸ್ತ್ರೀಯರ ಆತ್ಮಗಳು ಪ್ರಾಯಶಃ ಹೀಗೆ ಹೇಳಿರಬಹುದು, ‘ಓ ಛತ್ರಪತಿ ಶಿವಾಜಿ ಮಹಾರಾಜರೇ ಮತ್ತು ಚಿಮಾಜಿ ಅಪ್ಪಾ ದೊರೆಗಳೇ, ನಮ್ಮ ಮೇಲೆ ಸುಲ್ತಾನರುಗಳು ಮತ್ತು ಮುಸ್ಲಿಂ ಸಾಮಂತರು ಮತ್ತು ಇತರ ಸಾವಿರಾರು ಮಂದಿ ದೊಡ್ಡವರು ಮತ್ತು ಚಿಕ್ಕವರು ನಡೆಸಿದ ದೌರ್ಜನ್ಯಗಳನ್ನು, ತುಳಿತಗಳನ್ನು ಹಾಗೂ ಅತ್ಯಾಚಾರವನ್ನು ಮರೆಯಬೇಡಿ.’’

‘‘ಒಂದು ವೇಳೆ ಹಿಂದೂಗಳು ಜಯಶಾಲಿಗಳಾದಲ್ಲಿ, ನಮ್ಮ ಮೇಲೆ ನಡೆದ ಅತ್ಯಾಚಾರ, ಮಾನಹರಣ ಮತ್ತು ಇತರ ಖಂಡನಾರ್ಹ ಕೃತ್ಯಗಳಿಗೆ ಮುಸ್ಲಿಂ ಸ್ತ್ರೀಯರ ಮೇಲೆ ಪ್ರತೀಕಾರ ತೀರಿಸಲಾಗುತ್ತದೆ ಎಂಬುದನ್ನು ಮರೆಯದಿರಿ. ಇಂತಹ ಪ್ರತೀಕಾರದ ಭಯ ಮುಸ್ಲಿಂ ದೊರೆಗಳನ್ನು ಒಮ್ಮೆ ಕಾಡಲಾರಂಭಿಸಿತೆಂದರೆ ಮುಂದೆ ಎಂದಿಗೂ ಅವರು ಹಿಂದೂ ಸ್ತ್ರೀಯರ ಮೇಲೆ ಅಂತಹ ಅತ್ಯಾಚಾರ ನಡೆಸುವ ಧೈರ್ಯ ಮಾಡಲಾರರು.’’
ಹಿಂದೂಗಳು ಮುಸ್ಲಿಂ ಸ್ತ್ರೀಯರ ಬಗ್ಗೆ ತೋರಿದ ಗೌರವ ವಿಕೃತವಾಗಿತ್ತು. ಯಾಕೆಂದರೆ ಅದು ಹಿಂದೂ ಸಮಾಜಕ್ಕೆ ಭಾರೀ ಹಾನಿಕರವಾಗಿ ಪರಿಣಮಿಸಿತ್ತು. ಅದು ‘ಆತ್ಮಘಾತುಕ’ವಾಗಿತ್ತು. ಯಾಕೆಂದರೆ ಅದು ಮುಸ್ಲಿಂ ಸ್ತ್ರೀಯರು ಹಿಂದೂ ಸ್ತ್ರೀಯರ ವಿರುದ್ಧ ವರ್ಣಿಸಲಸದಳವಾದ ಅಪರಾಧಗಳನ್ನು ಮಾಡದಂತೆ ತಡೆಯಿತು ಎಂದು ಸಾವರ್ಕರ್ ವಿಷಾದಿಸುತ್ತಾರೆ.

ಅವರ ಪ್ರಕಾರ ಇದಕ್ಕಿಂತಲೂ ಹೆಚ್ಚು ಕೆಟ್ಟದು ಯಾವುದೆಂದರೆ ‘‘ಓರ್ವ ಮುಸ್ಲಿಂ ಹೆಂಗಸಿನೊಂದಿಗೆ ಯಾವುದೇ ರೀತಿಯ ಸಂಬಂಧಗಳೆಂದರೆ ಇಸ್ಲಾಂಗೆ ತಾವೇ ಮತಾಂತರಗೊಂಡಂತೆ’’ ಎಂಬ ಹಿಂದೂಗಳ ಮೂರ್ಖ ನಂಬಿಕೆ. ಈ ನಂಬಿಕೆಯು ‘‘ಮುಸ್ಲಿಂ ಸ್ತ್ರೀಯರ ಮೇಲೆ ದೌರ್ಜನ್ಯ ಎಸಗಲು ಹಿಂದೂ ಪುರುಷರಿಗೆ ಒಂದು ಅಡ್ಡಿಯಾಯಿತು’’

ತನ್ನ ಅಭಿಪ್ರಾಯವನ್ನು ಇನ್ನಷ್ಟು ಸ್ಪಷ್ಟಪಡಿಸಲು ‘ಆದರೆ ಒಂದು ಪಕ್ಷ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಓದುಗರಿಗೆ ಹೇಳುತ್ತಾರೆ: ‘‘ಒಂದು ವೇಳೆ ಭಾರತದ ಮೇಲೆ ಮುಸ್ಲಿಮರ ದಾಳಿಗಳು ನಡೆದಿದ್ದಾಗೆಲ್ಲ, ಹಿಂದೂಗಳು ಕೂಡ ತಾವು ಜಯಶಾಲಿಗಳಾದಾಗ, ಅವರು ಕೂಡ ಮುಸ್ಲಿಂ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಸಿದ್ದರೆ ಅಥವಾ ಬಲವಂತವಾಗಿ ಅವರನ್ನು ಮತಾಂತರಗೊಳಿಸಿದ್ದರೆ ಆಗ ಏನಾಗುತ್ತಿತ್ತು? ಆಗ ಅವರು ಹೆದರಿ ಯಾವುದೇ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರವೆಸಗುತ್ತಿರಲಿಲ್ಲ.’’

ಮುಂದುವರಿದು ಸಾವರ್ಕರ್ ಹೇಳುತ್ತಾರೆ: ‘‘ಮೊದಲ ಎರಡು ಅಥವಾ ಮೂರು ಶತಮಾನಗಳಲ್ಲಿ ಅವರಲ್ಲಿ ಇಂತಹ ಹೆದರಿಕೆ ಹುಟ್ಟುತ್ತಿದ್ದಲ್ಲಿ ನತದೃಷ್ಟೆಯರಾದ ಮಿಲಿಯಗಟ್ಟಲೆ ಹಿಂದೂ ಸ್ತ್ರೀಯರು ತಾವು ಅನುಭವಿಸಿದ್ದ ಅವಮಾನ, ಮತಾಂತರ, ಮಾನಹರಣ, ಅತ್ಯಾಚಾರ ಮತ್ತು ಕಲ್ಪನಾತೀತ ಹಿಂಸೆಗಳಿಂದ ಪಾರಾಗುತ್ತಿದ್ದರು.’’

ಹೀಗೆ ಒಂದು ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಲಾಗಿದೆ. ಆದರೆ, ಒಂದು ಅಸ್ತ್ರವಾಗಿ ಅತ್ಯಾಚಾರವನ್ನು ಬಳಸುವ ಸಾವರ್ಕರ್‌ರ ವಿಚಾರ ಇಂದಿಗೆ ಯಾಕೆ ಅನ್ವಯವಾಗಬೇಕು? ಅವರ ಪುಸ್ತಕ ಗತಕಾಲದ ಬಗ್ಗೆ ಅಲ್ಲವೇ?
ಯಾಕೆಂದರೆ, ಧರ್ಮದ ಬದಲಾವಣೆಯೆಂದರೆ ರಾಷ್ಟ್ರೀಯತೆಯ ಬದಲಾವಣೆ ಎಂದು ಸಾವರ್ಕರ್ ಸ್ಪಷ್ಟವಾಗಿ ಹೇಳಿದರು. ಹಿಂದೂಗಳು ಮತ್ತು ಮುಸ್ಲಿಮರು ಎರಡು ರಾಷ್ಟ್ರಗಳೆಂದು ಮೊತ್ತ ಮೊದಲಾಗಿ ವರ್ಗೀಕರಿಸಿದವರು ಸಾವರ್ಕರ್‌ರೇ ಹೊರತು ಮುಹಮ್ಮದ್ ಅಲಿ ಜಿನ್ನಾರಲ್ಲ. ಅವರ ವಿಶ್ವದೃಷ್ಟಿಯಲ್ಲಿ ಯಾವ ನೀತಿ ಸಂಹಿತೆಗಳು ಮುಸ್ಲಿಮರ ಮೇಲೆ ಪ್ರಭುತ್ವ ಸ್ಥಾಪಿಸಲು ಹಿಂದೂಗಳಿಗೆ ನೆರವಾಗುತ್ತವೋ ಅವುಗಳನ್ನು ಮಾತ್ರ ಅನುಸರಿಸಬೇಕು. ಹೀಗಾಗಿ ಅವರ ತರ್ಕದ ಪ್ರಕಾರ ಈಗ ದೊಂಬಿಗಳು ನಡೆದಾಗ ಮುಸ್ಲಿಂ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸುವುದು ಸಮರ್ಥನೀಯ. ಯಾಕೆಂದರೆ ಅದು ಮಧ್ಯಯುಗದಲ್ಲಿ ಮುಸ್ಲಿಮರು ನಡೆಸಿದ ಅನಾಗರಿಕ ಕೃತ್ಯಕ್ಕೆ ಪ್ರತೀಕಾರ. ಇಂದಿನ ದೊಂಬಿಗಳು ಇತಿಹಾಸ ಘರ್ಷಣೆಯ ಫಲಿತಾಂಶಗಳೇ.

ಆದ್ದರಿಂದಲೇ ಬಿಜೆಪಿ ನಾಯಕರು ತಾವು ಹಿಂದೂ ಪ್ರತಿರೋಧವೆಂದು ಕರೆಯುವುದರ ಹೀರೋಗಳನ್ನು ಹಾಡಿ ಹೊಗಳಲು ಹಾತೊರೆಯುತ್ತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಕೇಂದ್ರ ಸಚಿವ ವಿ.ಕೆ. ಸಿಂಗ್ ದಿಲ್ಲಿಯ ಅಂಬೇಡ್ಕರ್ ರಸ್ತೆಗೆ ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಮರುನಾಮಕರಣ ಮಾಡಬೇಕೆಂದು ಹೇಳುತ್ತಿರುವುದು.

ಕೃಪೆ: scroll.in 

Writer - ಎಜಾಝ್ ಅಶ್ರಫ್

contributor

Editor - ಎಜಾಝ್ ಅಶ್ರಫ್

contributor

Similar News